ಕೆನಡಾದಲ್ಲಿ ನರೆವೇರಿದ ಕನ್ನಡಿಗನ ಅಂತ್ಯಕ್ರಿಯೆ : ಭಾವ ಡಿ.ವಿ.ಗುರುಪ್ರಸಾದ್'ರಿಂದ ಮಾಹಿತಿ

First Published 1, Feb 2018, 7:21 PM IST
Actor Chandrashekar Cremated at Canada
Highlights

ಅದರಂತೆ ಎಲ್ಲ ಕಾರ್ಯಗಳೊಂದಿಗೆ ನಿನ್ನೆ ಮಧ್ಯಾಹ್ನ 3.30 ಕ್ಕೆ ಅಂದ್ರೆ ಭಾರತೀಯ ಸಮಯಕ್ಕೆ ಇಂದು ಬೆಳಗ್ಗೆ 1.30 ಕ್ಕೆ ಕೆನಡಾದ ರಾಜ್ಯಧಾನಿ ಒಟ್ಟಾವಾದ ಪೈನ್ ಕ್ರೆಸ್ಟ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಆಗಿದೆ.

ಕನ್ನಡಿಗರ ಎಡಕಲ್ಲು ಗುಡ್ಡದ ಮೇಲೆ ಚಿತ್ರ ಖ್ಯಾತಿಯ ನಟ ಚಂದ್ರಶೇಖರ್ ಈಗ ನೆನಪು ಮಾತ್ರ. ಮೊನ್ನೆನೇ ಕೆನಡಾದಲ್ಲಿ ತೀರಿ ಹೋಗಿದ್ದ ಚಂದ್ರು ದೇಹ ಭಾರತಕ್ಕೆ ಬರ್ತದೆಂಬ ನಿರೀಕ್ಷೆ ಗೆಳೆಯರಲ್ಲಿತ್ತು.ಮಲ್ಲೇಶ್ವರಂನಲ್ಲಿರೊ ಚಂದ್ರು ತಾಯಿ ಕೂಡ ಅದೇ ನಿರೀಕ್ಷೆಯಲ್ಲಿಯೇ ಇದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಚಂದ್ರು ತೀರಿ ಹೋದ ಮರು ದಿನವೆ ಮಗಳು ತಾನ್ಯಾ ಕೆನಡಾಕೆ ಪಯಣ ಬೆಳೆಸಿದ್ದರು.ಅದರಂತೆ ಎಲ್ಲ ಕಾರ್ಯಗಳೊಂದಿಗೆ ನಿನ್ನೆ ಮಧ್ಯಾಹ್ನ 3.30 ಕ್ಕೆ ಅಂದ್ರೆ ಭಾರತೀಯ ಸಮಯಕ್ಕೆ ಇಂದು ಬೆಳಗ್ಗೆ 1.30 ಕ್ಕೆ ಕೆನಡಾದ ರಾಜ್ಯಧಾನಿ ಒಟ್ಟಾವಾದ ಪೈನ್ ಕ್ರೆಸ್ಟ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಆಗಿದೆ. ಅಂತ್ಯಕ್ರಿಯೆ ವೇಳೆ ಚಂದ್ರು ಪುತ್ರಿ ತಾನ್ಯಾ ಪತ್ನಿ  ಶೀಲಾ ಮತ್ತು ಅಲ್ಲಿದ್ದ ಬಂದು-ಮಿತ್ರರು ಆಗಮಿಸಿ ಚಂದ್ರು ಅವರಿಗೆ ಕೊನೆಯ ನಮನ ಸಲ್ಲಿಸಿದರು. ಈ ವಿಷಯವನ್ನ ಚಂದ್ರಶೇಖರ್ ಭಾವ ನಿವೃತ್ತ ಪೊಲೀಸ್ ಅಧಿಕಾರಿ ಡಿ.ವಿ.ಗುರುಪ್ರಸಾದ್ ಪ್ರಕಟಣೆ ಮೂಲಕವೇ ತಿಳಿಸಿದ್ದಾರೆ.

loader