ಇವೆಲ್ಲದರ ಹಿಂದೆ ಒಂದು ಕತೆ ಇದೆ. ರಾಜಸ್ಥಾನದ ನಾನಕ್‌ ರಾಮ್‌ ಎನ್ನುವವರು ಅಜಯ್‌ ದೇವಗನ್‌ ಅಭಿಮಾನಿ. ಇತ್ತೀಚೆಗೆ ಅವರು ಅಜಯ್‌ ಎದುರಿಗೆ ಬಂದು ಬಹಿರಂಗವಾಗಿ ಬೇಡಿಕೆಯೊಂದನ್ನು ಇಟ್ಟಿದ್ದರು.

‘ನೀವು ಪಾನ್‌ ಮಸಾಲ ತಿನ್ನಿ ಅಂತ ಜಾಹೀರಾತಲ್ಲಿ ಹೇಳಿದ್ರಿ. ನಾನು ಪಾನ್‌ ಮಸಾಲ ತಿಂದೂ ತಿಂದೂ ಈಗ ರೋಗಿಯಾಗಿದ್ದೇನೆ. ನಾನೀಗ ಕ್ಯಾನ್ಸರ್‌ ಪೀಡಿತ. ದಯವಿಟ್ಟು ನೀವು ಇನ್ನು ಮುಂದೆ ಈ ರೀತಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬೇಡಿ’ ಎಂದು ಹೇಳಿದ್ದ.

ಕಾಜೋಲ್ ಮಗಳ ಏರ್‌ಪೋರ್ಟ್ ಲುಕ್ ವೈರಲ್: ಟ್ರೋಲ್‌ಗೆ ಅಜಯ್ ತಿರುಗೇಟು

ಇದಕ್ಕೆ ಖುದ್ದು ಅಜಯ್‌ ದೇವಗನ್‌ ಉತ್ತರ ನೀಡಿದ್ದಾರೆ. ‘ನಾನು ಪಾನ್‌ ಮಸಾಲ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ತಂಬಾಕು ರಹಿತ ಏಲಕ್ಕಿ ಪರಿಮಳದ ಉತ್ಪನ್ನದ ಜೊತೆಗೆ ಮಾತ್ರ. ಇದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಇದನ್ನು ಪರಿಶೀಲನೆ ಮಾಡಿಯೇ ನಾನು ಜಾಹೀರಾತಿಗೆ ಸಹಿ ಮಾಡಿದ್ದೆ. ಆದರೆ ಕೆಲವು ಕಡೆ ಇದೇ ಪ್ರಾಡಕ್ಟ್ನ ತಂಬಾಕು ಸಹಿತ ಉತ್ಪನ್ನಗಳೂ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು ಅಭಿಮಾನಿಗಳು ಆ ಬಗ್ಗೆ ಗಮನ ನೀಡಬೇಕು. ನಾನು ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಮತ್ತು ನನ್ನ ಮುಂದಿನ ಸಿನಿಮಾಗಳಲ್ಲಿ ಸಿಗರೇಟ್‌ ಸೇದುವುದು, ಮದ್ಯಪಾನ ಮಾಡುವ ದೃಶ್ಯ ಅನಿವಾರ್ಯ ಅಲ್ಲವಾದರೆ ನಾನು ಅಂಥಾ ದೃಶ್ಯಗಳಲ್ಲಿ ನಟಿಸುವುದಿಲ್ಲ’ ಎಂದು ವಿಷಾದ ಹೊರಹಾಕಿದ್ದಾರೆ ಅಜಯ್‌.

ಅಜಯ್ ಟೊಬ್ಯಾಕೋ ಜಾಹಿರಾತಿಗೆ ಕ್ಯಾನ್ಸರ್ ಪೇಷಂಟ್ ಉತ್ತರವಿದು!