ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಮುದ್ದುಲಕ್ಷ್ಮಿ’ ಒಂದು ವಿಭಿನ್ನ ಕಥೆವುಳ್ಳ ಧಾರಾವಾಹಿ. ಎಲ್ಲಾ ಧಾರಾವಾಹಿಗಳಿಗಿಂತ ತುಸು ವಿಭಿನ್ನವಾಗಿ ಗಮನ ಸೆಳೆಯುತ್ತದೆ. ಕಪ್ಪು ಹುಡುಗಿ ಮನಸ್ಸು ಹೇಗಿರುತ್ತದೆ, ಅವರು ಜನರ ಭಾವನೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ? ಅಂತೆಲ್ಲಾ ಇದರಲ್ಲಿ ತೋರಿಸಲಾಗಿದೆ. ಇನ್ನು ಕಾಮನ್ ಆಗಿ ಜನರಲ್ಲಿ ಮೂಡುವ ಪ್ರಶ್ನೆ ಈ ನಟಿ ನಿಜವಾಗಲೂ ಇಷ್ಟು ಕಪ್ಪಾ? ಯಾರಿವಳು? ಏನು ಮಾಡುತ್ತಿದ್ದಾಳೆ ಎಂದು ಇಲ್ಲಿದೆ ನೋಡಿ.

ಲಕ್ಷ್ಮಿ ಪಾತ್ರ ಮಾಡುವ ನಟಿಯ ಹೆಸರು ಅಶ್ವಿನಿ. ಇವರು ಮೂಲತಃ ಮೈಸೂರಿನವರು. ಆ್ಯಕ್ಟಿಂಗ್ ಇಷ್ಟಪಡುವ ಅಶ್ವಿನಿ ಈ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ಮ್ಯೂಸಿಕ್ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರು.

ಧಾರಾವಾಹಿಗೆ ಬೇಕಾದಂತೆ ಮೇಕಪ್ ಆದ ಮೇಲೆ ಅಶ್ವಿನಿಗೆ ಇದೊಂದು ಸವಾಲಿನ ಪಾತ್ರವಾಗಿತ್ತು. ಲಕ್ಷ್ಮಿ ಪಾತ್ರ ಜನರಿಂದ ಮೆಚ್ಚುಗೆ ಗಳಿಸಿದೆ. ಸಿನಿಮಾ ಆಫರ್ ಗಳು ಬರುತ್ತಿವೆ. ಈ ವಿಭಿನ್ನ ಪಾತ್ರ ಅಶ್ವಿನಿಯವರನ್ನು ಜನರಿಗೆ ಇನ್ನಷ್ಟು ಹತ್ತಿರ ಮಾಡಿದೆ.

ಕಿರುತೆರೆ ಕಪ್ಪು ಸುಂದರಿಯ ಬದುಕು!