ಮೇ. 29ಕ್ಕೆ ಅಂಬರೀಶ್‌ ಅವರ ಹುಟ್ಟುಹಬ್ಬ. ಅವರಿಲ್ಲದ ಮೊದಲ ಹುಟ್ಟುಹಬ್ಬದ ಆಚರಣೆಯಿದು. ಅದರ ಮರುದಿನವೇ ಚಿತ್ರ ತಂಡ ‘ಅಮರ್‌’ ಬಿಡುಗಡೆಗೆ ದಿನಾಂಕ ಫಿಕ್ಸ್‌ ಮಾಡಿದೆ. ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಅವರ ಬೆಳ್ಳಿತೆರೆ ಪ್ರವೇಶದ ಸಿನಿಮಾ ಎನ್ನುವುದರ ಜತೆಗೆ ನಾಗಶೇಖರ್‌ ನಿರ್ದೇಶನವೂ ಇಲ್ಲಿ ಕುತೂಹಲ ಹುಟ್ಟಿಸಿದೆ. ಈಗಾಗಲೇ ಈ ಚಿತ್ರ ಹಾಡುಗಳ ಮೂಲಕ ಸಖತ್‌ ಸದ್ದು ಮಾಡಿದೆ.

ಸಂದೇಶ್‌ ಕಂಬೈನ್ಸ್‌ ಮೂಲಕ ಸಂದೇಶ್‌ ಈ ಚಿತ್ರವನ್ನು ನಿರ್ಮಿಸಿದ್ದು, ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಹಾಗೂ ಸಿಂಗಾಪುರ, ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣಗೊಂಡಿದೆ. ನಿರ್ದೇಶಕ ನಾಗಶೇಖರ್‌ ಅವರೇ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ದರ್ಶನ್‌ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಮರ್ ಚಿತ್ರಕ್ಕೆ ಸೆನ್ಸಾರ್ ಗ್ರೀನ್ ಸಿಗ್ನಲ್!