ಅಮರ್ ಚಿತ್ರದ ಟೀಸರ್ ಪ್ರೇಮಿಗಳ ದಿನಾಚರಣೆ ಅಂದರೆ ಇಂದು ಬೆಳಿಗ್ಗೆ 11.07 ಕ್ಕೆ ಬಿಡುಗಡೆಯಾಗಲಿದೆ. ಅಭಿಷೇಕ್‌ ಮೊದಲ ಚಿತ್ರದಲ್ಲಿ ಹೇಗೆ ಕಾಣುತ್ತಾರೆ , ಅವರು ಹೇಗೆ ನಟಿಸಿದ್ದಾರೆ ಎಂದು ಅವರನ್ನು ನೋಡಿದರೆ ಥೇಟ್ ಅಂಬಿ ಅಣ್ಣನಂತೆ ಕಾಣಿಸುತ್ತಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಭಿಷೇಕ್ ಮೊದಲ ಚಿತ್ರದ ಟೀಸರ್‌ಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕ ಪಂಡಿತ್ ಶುಭ ಹಾರೈಸಿದ್ದಾರೆ.

'ಪ್ರಿಯ ಅಭಿ.. ಟೀಸರ್ ಬಿಡುಗಡೆಯೊಂದಿಗೆ ಚಿತ್ರಯಾನದ ಮೊದಲ ಅಡಿಯಿಡುತ್ತಿರುವ ಶುಭ ಘಳಿಗೆ ಇದು. ಎಲ್ಲರಿಗಿಂತಲೂ ಹೆಚ್ಚಾಗಿ ನಾಳೆಯ ಟೀಸರ್‌ಗಾಗಿ ಕೌತುಕದಿಂದ ಕಾಯ್ತಾ ಇದೀನಿ. ಪೋಸ್ಟರ್‌ಗಳು ಸಖತ್ತಾಗಿದೆ. ನನ್ನ ಶುಭ ಹಾರೈಕೆಗಳು 'ಎಂದೆಂದಿಗೂ-ನಿನ್ನೊಂದಿಗೆ' ಇರುತ್ತವೆ. ನೀನೆಂದೂ ನನ್ನ ಪುಟ್ಟ 'ಅಮರ್'' ಎಂದು ಕೆಜಿಎಫ್ ಕಿಂಗ್ ಟ್ವೀಟ್ ಮಾಡಿದ್ದಾರೆ.

 

"ಪೋಸ್ಟರ್ ಅದ್ಭುತವಾಗಿ ಕಾಣುತ್ತದೆ. ಟೀಸರ್ ನೋಡಲು ಕಾಯುತ್ತಿದ್ದೇನೆ. ಇದನ್ನು ನಿನ್ನ ಹೊರತುಪಡಿಸಿ ಬೇರೆ ಯಾರೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಖಂಡಿತಾ ಯು ಆರ್ ರಾಕ್. ಶುಭವಾಗಲಿ ಡಿಯರ್" ಎಂದು ರಾಧಿಕ ಪಂಡಿತ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.