ಬೆಂಗಳೂರು (ಆ. 30): ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಫೇಸ್‌ಬುಕ್‌ನಲ್ಲಿ ಕಿಡಿಗೇಡಿಯೊಬ್ಬ ಕಿರುಕುಳ ನೀಡಿದ್ದಾನೆ. 

ಅತೀ ಕೀಳುಮಟ್ಟದ ಅಶ್ಲೀಲ ಶಬ್ಧಗಳನ್ನು ಬಳಸಿ ನಿಂದಿಸಿದ್ದಾನೆ.  ದರ್ಶನ್  ಪತ್ನಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿ ಮಾಡಿ ಅದಕ್ಕೆ  ದರ್ಶನ್ ಫೋಟೊ ಎಡಿಟ್ ಮಾಡಿದ್ದಾನೆ.  ದರ್ಶನ್ ಪತ್ನಿ ಜೊತೆ ಇರುವ ಫೋಟೋ ಜೊತೆ "my wife" ಎಂದು ಬರೆದುಕೊಂಡಿದ್ದಾನೆ.  

ನಕಲಿ ಖಾತೆ ಮೂಲಕ ದರ್ಶನ್ ಪತ್ನಿ ಹಾಗೂ ಕುಟುಂಬಸ್ಥರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.  ಈ ಕುರಿತು ವಿಜಯಲಕ್ಷ್ಮೀ  ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಐಪಿಸಿ ಸೆಕ್ಷನ್ 354(D),354A(1)(iv),(505)(507)(420)ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.