ಕಳೆದ ವರ್ಷ ಕ್ರಿಸ್'ಮಸ್ ವೇಳೆ ತೆರೆಕಂಡ ದಂಗಲ್ ಚಿತ್ರವು 62ನೇ ಫಿಲ್ಮ್'ಫೇರ್ ಉತ್ಸವದಲ್ಲಿ ಹಲವಾರು ಅವಾರ್ಡ್'ಗಳನ್ನು ಬಾಚಿಕೊಂಡಿದೆ. ದಂಗಲ್ ಚಿತ್ರಕ್ಕೆ ಭಾರತದ 6 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು.
ಬೀಜಿಂಗ್(ಮೇ.21): ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಚೀನಾವೊಂದರಲ್ಲೇ 649 ಕೋಟಿ ರುಪಾಯಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಚೀನಾ ಚಿತ್ರ ಮಾರುಕಟ್ಟೆಯಲ್ಲಿ ಈ ತಿಂಗಳ ಆರಂಭದಲ್ಲಿ ತೆರೆಕಂಡ ದಂಗಲ್ ಕೇವಲ ಮೂರು ವಾರಗಳಲ್ಲೇ 649 ಕೋಟಿ ರುಪಾಯಿ ಗಲ್ಲಾ ಪೆಟ್ಟಿಗೆ ಲೂಟಿ ಮಾಡಿರುವ ದಂಗಲ್, ಪಿಕೆ ಚಿತ್ರದ ಆದಾಯಕ್ಕಿಂತ 5 ಪಟ್ಟು ಹೆಚ್ಚು ಹಣ ಗಳಿಕೆ ಮಾಡಿದೆ.
ಚಿತ್ರದ ಗಳಿಕೆ ಬಗ್ಗೆ ದಂಗಲ್ ಚಿತ್ರ ನಿರ್ದೇಶಕ ತರಣ್ ಆದರ್ಶ್ ಸಂತಸ ಹಂಚಿಕೊಂಡಿದ್ದು ಹೀಗೆ..
ಅಮೆರಿಕದ ಚಿತ್ರ ಮಾರುಕಟ್ಟೆ ಬಳಿಕ ಅತಿದೊಡ್ಡ ಚಿತ್ರ ಮಾರುಕಟ್ಟೆಎಂಬ ಖ್ಯಾತಿ ಪಡೆದಿರುವ ಚೀನಾದ ಮಾರುಕಟ್ಟೆಯಲ್ಲಿ ವಿಶ್ವಾದ್ಯಂತ ಹಲವು ದಾಖಲೆ ನಿರ್ಮಿಸುತ್ತಿರುವ ಬಾಹುಬಲಿ-2 ಚಿತ್ರವೂ ದಂಗಲ್ ಚಿತ್ರದಷ್ಟುಆದಾಯ ಗಳಿಕೆ ಮಾಡಿಲ್ಲ ಎನ್ನುವುದು ಮತ್ತೊಂದು ವಿಶೇಷ. ಬಾಹುಬಲಿ-2 ಚಿತ್ರವು ಮೊದಲ ವಾರದಲ್ಲಿ ಕೇವಲ 200 ಕೋಟಿ ರುಪಾಯಿ ಬಾಚಿಕೊಳ್ಳುವಲ್ಲಿ ಮಾತ್ರ ಸಫಲವಾಗಿದೆ.
ಅಮೀರ್ ಖಾನ್ ದಂಗಲ್ ಚಿತ್ರದಲ್ಲಿ ಹರ್ಯಾಣದ ಕುಸ್ತಿಪಟು ಮಹಾವೀರ್ ಸಿಂಗ್ ಪೋಗತ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಹೆಣ್ಣುಮಕ್ಕಳಾದ ಗೀತಾ ಪೋಗತ್ ಮತ್ತು ಬಬಿತಾ ಪೋಗತ್ ಅವರಿಗೆ ಕುಸ್ತಿಯ ಪಟ್ಟುಗಳನ್ನು ಹೇಳಿಕೊಡುವ ಗುರುವಿನ ಪಾತ್ರವನ್ನು ನಿಭಾಯಿಸಿದ್ದಾರೆ.
ಕಳೆದ ವರ್ಷ ಕ್ರಿಸ್'ಮಸ್ ವೇಳೆ ತೆರೆಕಂಡ ದಂಗಲ್ ಚಿತ್ರವು 62ನೇ ಫಿಲ್ಮ್'ಫೇರ್ ಉತ್ಸವದಲ್ಲಿ ಹಲವಾರು ಅವಾರ್ಡ್'ಗಳನ್ನು ಬಾಚಿಕೊಂಡಿದೆ. ದಂಗಲ್ ಚಿತ್ರಕ್ಕೆ ಭಾರತದ 6 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು.
ಹೆಣ್ಣು ಭ್ರೂಣ ಹತ್ಯೆ ತಡೆಯುವ ಮತ್ತು ಅವರ ಶಿಕ್ಷಣ ಪ್ರೋತ್ಸಾಹಿಸುವ ಉದ್ದೇಶದಿಂದ ಜಾರಿಗೆ ತಂದ 'ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆ ಪ್ರಚಾರ ಮಾಡುವ ಉದ್ದೇಶದಿಂದ ಉತ್ತರಪ್ರದೇಶ, ಉತ್ತರಾಖಂಡ್, ಹರ್ಯಾಣ, ಛತ್ತೀಸ್'ಘಡ್, ನವದೆಹಲಿ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿತ್ತು.
