ಎಂ ಆರ್‌ ಬ್ಯಾನರ್‌'ನಲ್ಲಿ ನಿರ್ದೇಶಕ ಸಂತು ಹೊಸ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತು. ಆ ಚಿತ್ರಕ್ಕೆ ಕೆಂಡಸಂಪಿಗೆ ವಿಕ್ಕಿ ನಾಯಕ ಅಂತನೂ ಗೊತ್ತು. ಪದ್ಮನಾಬ್‌ ನಿರ್ಮಾಪಕ ಎಂಬುದೂ ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ ಚಿತ್ರಕ್ಕೆ ನಾಯಕಿ ಮತ್ತು ಚಿತ್ರದ ಹೆಸರು ಪಕ್ಕಾ ಆಗಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳುವ ಹಂತದಲ್ಲಿರುವ ಈ ಚಿತ್ರಕ್ಕೆ ಸಂಯುಕ್ತ ಹೆಗ್ಡೆ ನಾಯಕಿ, ‘ಕಾಲೇಜು ಕುಮಾರ' ಅನ್ನೋದು ಚಿತ್ರದ ಟೈಟಲ್ಲು. ‘ಕಿರಿಕ್‌ ಪಾರ್ಟಿ' ಚಿತ್ರದಲ್ಲಿ ಸಿಕ್ಕಾಪಟ್ಟೆಕಿರಿಕ್‌ ಮಾಡಿದ ಹುಡುಗಿ ಈಕೆ. ಈ ಚಿತ್ರದ ನಂತರ ಆಲ್ಬಂ ಮಾಡಿ ಸುದ್ದಿಯಾದವರು. ಜತೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಒಂದಿಷ್ಟುಸದ್ದು ಮಾಡುತ್ತಿದ್ದ ಸಂಯುಕ್ತ ಹೆಗ್ಡೆ ಈಗ ಸಂತು ನಿರ್ದೇಶನದ, ವಿಕ್ಕಿ ನಟನೆ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ನಡುವೆ ‘ವಾಸು' ಚಿತ್ರಕ್ಕೆ ಕೂಡ ನಾಯಕಿ ಆಗಿರುವ ಸಂಯುಕ್ತಾ ಸೋಲೋ ನಾಯಕಿ ಆಗಿ ಎರಡನೇ ಅವಕಾಶ ಸಿಕ್ಕಂತಾಗಿದೆ.
ಎಂ ಆರ್ ಬ್ಯಾನರ್'ನಲ್ಲಿ ನಿರ್ದೇಶಕ ಸಂತು ಹೊಸ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತು. ಆ ಚಿತ್ರಕ್ಕೆ ಕೆಂಡಸಂಪಿಗೆ ವಿಕ್ಕಿ ನಾಯಕ ಅಂತನೂ ಗೊತ್ತು. ಪದ್ಮನಾಬ್ ನಿರ್ಮಾಪಕ ಎಂಬುದೂ ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ ಚಿತ್ರಕ್ಕೆ ನಾಯಕಿ ಮತ್ತು ಚಿತ್ರದ ಹೆಸರು ಪಕ್ಕಾ ಆಗಿದೆ. ಇನ್ನೇನು ಚಿತ್ರೀಕರಣಕ್ಕೆ ತೆರಳುವ ಹಂತದಲ್ಲಿರುವ ಈ ಚಿತ್ರಕ್ಕೆ ಸಂಯುಕ್ತ ಹೆಗ್ಡೆ ನಾಯಕಿ, ‘ಕಾಲೇಜು ಕುಮಾರ' ಅನ್ನೋದು ಚಿತ್ರದ ಟೈಟಲ್ಲು. ‘ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಿಕ್ಕಾಪಟ್ಟೆಕಿರಿಕ್ ಮಾಡಿದ ಹುಡುಗಿ ಈಕೆ. ಈ ಚಿತ್ರದ ನಂತರ ಆಲ್ಬಂ ಮಾಡಿ ಸುದ್ದಿಯಾದವರು. ಜತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಒಂದಿಷ್ಟುಸದ್ದು ಮಾಡುತ್ತಿದ್ದ ಸಂಯುಕ್ತ ಹೆಗ್ಡೆ ಈಗ ಸಂತು ನಿರ್ದೇಶನದ, ವಿಕ್ಕಿ ನಟನೆ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ನಡುವೆ ‘ವಾಸು' ಚಿತ್ರಕ್ಕೆ ಕೂಡ ನಾಯಕಿ ಆಗಿರುವ ಸಂಯುಕ್ತಾ ಸೋಲೋ ನಾಯಕಿ ಆಗಿ ಎರಡನೇ ಅವಕಾಶ ಸಿಕ್ಕಂತಾಗಿದೆ.
ವರದಿ: ಕನ್ನಡಪ್ರಭ, ಸಿನಿವಾರ್ತೆ
