ಸೋಷಲ್‌ ಮೀಡಿಯಾಗಳಲ್ಲಿ ಅವಾಗವಾಗ ತಮ್ಮ ಹಾಟ್‌ ಫೋಟೋಗಳನ್ನು ಹಾಕುತ್ತಲೇ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಅಂಥವರ ಪಟ್ಟಿಯಲ್ಲಿ ಮುಖ್ಯರು ಶಿಲ್ಪಾ ಶೆಟ್ಟಿ, ಸುಶ್ಮಿತಾ ಸೇನ್‌, ಕರೀಷ್ಮಾ ಕಪೂರ್‌, ಮಲೈಕಾ ಅರೋರ ಮೊದಲಾದವರು.

ಟಬು ಹಾಟ್ ಪೋಸ್ ; ವಯಸ್ಸು 47 ಕಾಣ್ಸೋದು 20 ರಂತೆ!

ಹಾಗೇ ಸುಮ್ಮನೆ ಇವರ ಸೋಷಲ್‌ ಮೀಡಿಯಾ ಅಕೌಂಟ್‌ಗಳಿಗೆ ಭೇಟಿ ಕೊಟ್ಟರೆ ಸಾಕು ಯಾವ ಯಂಗ್‌ ನಟಿಗೂ ಕಡಿಮೆ ಇಲ್ಲದಂತಹ ಅಂದವಾದ ಫೋಟೋಗಳು, ಸೊಗಸಾದ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಶಿಲ್ಪಾ ಶೆಟ್ಟಿಮೊನ್ನೆ ಮೊನ್ನೆ ಅಪ್‌ಲೋಡ್‌ ಮಾಡಿದ್ದ ವಿಡಿಯೋ ಒಂದು ಸಾಕ್ಷಿ. ಅವಕಾಶಗಳು ಕಡಿಮೆಯಾದರೂ, ಪೋಷಕ ಪಾತ್ರಗಳು ಬರುತ್ತಿದ್ದರೂ ತಾವು ಇನ್ನೂ ಫಿಟ್‌ ಆಗಿದ್ದೇವೆ. ಲೀಡ್‌ ರೋಲ್‌ ಮಾಡಲು ನಾವಿನ್ನೂ ಸಮರ್ಥರು ಎನ್ನುವ ಉದ್ದೇಶದಿಂದಲೂ ಈ ರೀತಿಯ ಫೋಟೋ ಹಾಕುತ್ತಾರೆ ಎನ್ನುವುದು ಹೌದಾದರೂ, ಅಭಿಮಾನಿಗಳಿಂದ ಇವುಗಳು ಲಕ್ಷಗಟ್ಟಲೆ ಲೈಕ್ಸ್‌ ಪಡೆಯುತ್ತಿರುವುದು ಸುಳ್ಳಲ್ಲ.