Asianet Suvarna News Asianet Suvarna News

2018: ಎವರಿವನ್‌ ಈಸ್‌ ಎ ಹೀರೋ : ಕೇರಳ ಪ್ರವಾಹದ ಕುರಿತು ಸಿನಿಮಾ ಆಸ್ಕರ್‌ಗೆ

2018ರಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಕಥಾಹಂದರ ಹೊಂದಿರುವ ಮಲೆಯಾಳಂನ ‘2018: ಎವರಿವನ್‌ ಈಸ್‌ ಎ ಹೀರೋ’ (2018 everyone Is A Hero) ಚಿತ್ರ ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಆಸ್ಕರ್‌ಗೆ ಅಧಿಕೃತ ಚಿತ್ರವಾಗಿ ಪ್ರವೇಶ ಪಡೆದಿದೆ

2018 everyone Is A Hero Movie entered Oscar A movie about Kerala Flood akb
Author
First Published Sep 28, 2023, 10:07 AM IST

ಚೆನ್ನೈ: 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಕಥಾಹಂದರ ಹೊಂದಿರುವ ಮಲೆಯಾಳಂನ ‘2018: ಎವರಿವನ್‌ ಈಸ್‌ ಎ ಹೀರೋ’ (2018 everyone Is A Hero) ಚಿತ್ರ ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಆಸ್ಕರ್‌ಗೆ ಅಧಿಕೃತ ಚಿತ್ರವಾಗಿ ಪ್ರವೇಶ ಪಡೆದಿದೆ. ಇದೇ ಚಿತ್ರಕ್ಕಾಗಿ ನಾಯಕ ನಟ ಟೋವಿನ್‌ ಥೋಮಸ್‌ (Tovin Thomas) ಅವರು ಆ್ಯಮ್‌ಸ್ಟರ್‌ಡಾಮ್‌ ಚಿತ್ರೋತ್ಸವಲ್ಲಿ (Amsterdam Film Festival) ಏಷ್ಯಾದ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದ ಹೊತ್ತಿನಲ್ಲೇ ಈ ಸಿಹಿ ಸುದ್ದಿ ಹೊರಬಿದ್ದಿದೆ.

ಈ ಕುರಿತು ಬುಧವಾರ ಅಧಿಕೃತ ಘೋಷಣೆ ಮಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಗಿರೀಶ್‌ ಕಾಸರವಳ್ಳಿ (Girish Kasaravalli)  ‘ವ್ಯಾಕ್ಸಿನ್‌ ವಾರ್‌, ದಿ ಕೇರಳ ಸ್ಟೋರಿ, ಗದರ್‌ 2 (Gadar-2) ಸೇರಿದಂತೆ ಹಲವು ಚಿತ್ರಗಳನ್ನು ವೀಕ್ಷಿಸಿದ ಬಳಿಕ ಈ ಚಿತ್ರವನ್ನು ಆಯ್ಕೆ ಮಾಡಿದ್ದೇವೆ. ಇದು ಸಮಗ್ರ ಭಾರತೀಯ ಚಿತ್ರರಂಗದ ಆಯ್ಕೆಯಾಗಿದ್ದು, ಪ್ರಸ್ತುತ ಚಿತ್ರವು ಕೇವಲ ಚಿತ್ರಕಥೆಯಲ್ಲದೆ ತಾಂತ್ರಿಕತೆ ಇನ್ನೂ ಮುಂತಾದ ಅಂಶಗಳಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಚಿತ್ರವು ಭಾರತೀಯರ ನೈತಿಕತೆ, ಸನ್ನಿವೇಶ ಮತ್ತು ಜನರ ಅತ್ಯಂತ ನೈಜ ಚಿತ್ರಣ ನೀಡುತ್ತದೆ. ಜೊತೆಗೆ ಚಿತ್ರ ಕೇವಲ ಭಾರತವನ್ನು ಪ್ರತಿನಿಧಿಸುತ್ತಿಲ್ಲ. ಬದಲಾಗಿ ಇಡೀ ವಿಶ್ವವನ್ನು ಆವರಿಸಿಕೊಂಡಿರುವ ಜಾಗತಿಕ ಹವಮಾನ ಬದಲಾವಣೆಯ ಸಮಸ್ಯೆಗಳನ್ನು ಜಗತ್ತನ ಮುಂದಿಟ್ಟಿದೆ. ಹಾಗಾಗಿ ಜ್ಯೂಡ್‌ ಅಂಥೋಣಿ ಜೋಸೆಫ್‌ (Jude Anthony Joseph) ನಿರ್ದೇಶನದ ಈ ಚಲನಚಿತ್ರವನ್ನು ನಾವು ಸರ್ವಾನುಮತದಿಂದ ಆಯ್ಕೆ ಮಾಡಿದೆವು" ಎಂದು ಹೇಳಿದ್ದಾರೆ.

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

ಈ ಚಿತ್ರ ಕೇರಳದಲ್ಲಿ 2018ರಲ್ಲಿ ಬಂದ ಪ್ರವಾಹದಿಂದ ಉಂಟಾದ ಸಂಕಷ್ಟವನ್ನು ಅತ್ಯಂತ ಎಳೆಎಳೆಯಾಗಿ ಮನಮುಟ್ಟುವ ನಿರೂಪಣಾ ಶೈಲಿಯಲ್ಲಿ ತೋರಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿತ್ತು.

ಅಯ್ಯೋ ನಮ್ದು ಇದೇ ಕತೆ... ನಂದಿನಿ ಹಾಡಿನ ನ್ಯೂವರ್ಷನ್‌ಗೆ ಹೌದಪ್ಪ ಹೌದು ಎಂದ ಗೃಹಿಣಿಯರು...!

Follow Us:
Download App:
  • android
  • ios