ಕನ್ನಡ ಚಿತ್ರರಂಗದ ಹೊಸಫಸಲು: ದುಂಡು ಮುಖ, ಬೊಗಸೆ ಕಂಗಳ ನಿಶ್ವಿಕಾ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 4:56 PM IST
10 best youngest hottest actress Nishvika Naidu from sandalwood
Highlights

ಹೆಸರು ನಿಶ್ವಿಕಾ ನಾಯ್ಡು. ಸದ್ಯಕ್ಕೆ ಕನ್ನಡದ ಲಕ್ಕಿ ಸ್ಟಾರ್. ಮೊದಲ ಚಿತ್ರ ತೆರೆ ಕಾಣುವ ಮುನ್ನವೇ  ಕೈ ತುಂಬಾ ಆಫರ್ ಗಿಟ್ಟಿಸಿಕೊಂಡು ಕನ್ನಡದ ಬ್ಯುಸಿ ನಟಿ ಎಂದೆನಿಸಿಕೊಂಡ ಚೆಲುವೆ. ದುಂಡು ಮುಖ, ಸಂಪಿಗೆ ಮೂಗು, ಬೊಗಸೆ ಕಂಗಳ ಈ ಹುಡುಗಿ ಮೊದಲು ನಾಯಕಿ ಆಗಿದ್ದು 'ವಾಸು ನೀನ್ ಪಕ್ಕಾ ಕಮರ್ಷಿಯಲ್'  ಚಿತ್ರಕ್ಕೆ. ವಿಶಿಷ್ಟ ಅಂದ್ರೆ, ಆ ಚಿತ್ರ ತೆರೆ ಕಾಣುವ ಮುನ್ನವೇ ಕಾಲ್‌ಶೀಟ್ ನೀಡಿದ ಎರಡನೇ ಚಿತ್ರ 'ಅಮ್ಮ ಐ ಲವ್ ಯು' ರಿಲೀಸ್ ಆಯಿತು. ಅಲ್ಲಿಗೆ ನಿಶ್ವಿಕಾ ಸಿನಿಜರ್ನಿಯ ಮೊದಲ ಸಿನಿಮಾ  'ಅಮ್ಮ ಐ ಲವ್ ಯು'. ಅಲ್ಲಿಂದ 'ವಾಸು ನೀನ್ ಪಕ್ಕಾ ಕಮರ್ಷಿಯಲ್'  ಕೂಡ ತೆರೆ ಕಂಡು ದೊಡ್ಡ ಸುದ್ದಿ ಮಾಡುವ ಹೊತ್ತಿಗೆ ಪಡ್ಡೆ ಹುಲಿ, 'ಜಂಟಲ್ ಮ್ಯಾನ್' ಚಿತ್ರಗಳಿಗೆ ನಾಯಕಿ ಆಗಿ ುಲ್ ಬ್ಯುಸಿ ಆಗಿದ್ದಾರೆ.

1. ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಬೆಂಗಳೂರು. ಪದವಿ ಮುಗಿದಿದೆ.

2. ನಟಿ ಆಗ್ಬೇಕು ಅನ್ನೋ ಹುಚ್ಚಿತ್ತಾದರೂ, ಇಷ್ಟು ಬೇಗ ಅದು ಈಡೇರಿದ್ದೇ ವಿಶೇಷ.

3. ಮೊದಲ ಚಿತ್ರದ ಚಿತ್ರೀಕರಣ ಮೊದಲ ದಿನ ಕ್ಯಾಮರಾ ಎದುರಿಸುವಾಗ ಸಹಜವಾಗಿಯೇ ಎಕ್ಸೈಟ್  ಆಗಿದ್ದೆ. ಭಯ ಎನ್ನುವುದಕ್ಕಿಂತ  ಹೇಂಗಿರುತ್ತೆ ಆ ಕ್ಷಣ ಎನ್ನುವ ಕಾತುರ. ಆ  ಕ್ಷಣಗಳು ಬಂದಾಗ ಆತಂಕದಲ್ಲೇ ಮೊದಲ ಸೀನ್‌ಗೆ ಅಭಿನಯಿಸಿದೆ. ಅದೃಷ್ಣ ಎನ್ನುವ ಹಾಗೆ ಅದು ಓಕೆ ಕೂಡ ಆಯಿತು. ಅಲ್ಲಿಂದ ಎಲ್ಲವೂ ಸಹಜ ಎನಿಸಿದವು. 

4. ಇಂಥದ್ದೇ ಪಾತ್ರ ಅಂತೇನು ಇಲ್ಲ. ನಾನು ನೋಡ್ತಿರೋದು ನಟನೆಗೆ ಅವಕಾಶ ಇರುವಂತಹ ಪಾತ್ರಗಳನ್ನು. ಸದ್ಯಕ್ಕೀಗ ಅಂಥದ್ದೇ ಪಾತ್ರಗಳು ಸಿಕ್ಕ ಖುಷಿಯಿದೆ.

5. ರೋಲ್ ಮಾಡೆಲ್ ಅಂತ ನಿರ್ಧಿಷ್ಟವಾಗಿ ಇಂತಹವರೇ ಅಂತೇನು ಇಲ್ಲ. ಅನೇಕ ನಟಿಯರು ಸ್ಫೂರ್ತಿ ಆಗಿದ್ದಾರೆ. ಅವರ ಪ್ರಭಾವಕ್ಕೂ ಒಳಗಾಗಿದ್ದೇನೆ. ಆದರೂ ನನಗೆ ನಾನೇ ರೋಲ್ ಮಾಡೆಲ್.

-ದೇಶಾದ್ರಿ ಹೊಸ್ಮನೆ

loader