’ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ಲೀಕ್ | ಗರಂ ಆದ ಸುದೀಪ್ | ಯಾರು ಈ ಕೆಲಸ ಮಾಡಿದ್ದು?
ಬೆಂಗಳೂರು (ಅ. 04): ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಕಿಚ್ಚ ಸುದೀಪ್, ಅಂಬರೀಶ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ನೋಡಿದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ..!
ಈ ಚಿತ್ರ ಯುಟ್ಯೂಬ್ ನಲ್ಲಿ ಲೀಕ್ ಆಗಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಇದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಸುದೀಪ್ ಕೂಡಲೇ ಟ್ವೀಟ್ ಮಾಡಿದ್ದಾರೆ.
’ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಬೆಂಬಲಕ್ಕೆ ನಿಮಗೆಲ್ಲಾ ಧನ್ಯವಾದಗಳು. ನಮ್ಮೊಂದಿಗೆ ಬೆಂಬಲಕ್ಕೆ ನಿಂತಿದ್ದಕ್ಕೆ ಕೃತಜ್ಞತೆಗಳು ಎಂದಿದ್ದಾರೆ. ಜೊತೆಗೆ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದವರಿಗೆ, ಗೆಳೆಯಾ, ನೀನು ನನ್ನಿಂದ ದೂರದಲ್ಲೆನೂ ಇಲ್ಲ. ಇದು ಕೋಪದ ಮಾತಲ್ಲ. ಸರಿ- ತಪ್ಪುಗಳ ಮಾತು. ಸಿಗೋಣ’ ಎಂದು ಟ್ವೀಟ್ ಮಾಡಿದ್ದಾರೆ.
ಯಾರು ಅಪ್ ಲೋಡ್ ಮಾಡಿದ್ದು ಎಂದು ತಿಳಿದು ಬಂದಿಲ್ಲ. ಯೂಟ್ಯೂಬ್ ನಿಂದ ಲಿಂಕ್ ಡಿಲೀಟ್ ಮಾಡಲಾಗಿದೆ.
