ಹಾಸನ : ತಮ್ಮ ಸ್ವ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಎಚ್.ಡಿ.ದೇವೇಗೌಡ ಬಿಟ್ಟು ಕೊಟ್ಟಿದ್ದು, ಇದರಿಂದ ಪುತ್ರ ರೇವಣ್ಣ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. 

ಹಾಸನದ ಆಲೂರಿನಲ್ಲಿ ಮಾತನಾಡಿದ ಅವರು ದೇವೇಗೌಡರು ಹಾಸನದಿಂದಲೇ ಸ್ಪರ್ಧೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ಹಾಸನದಿಂದಲೇ ಸ್ಪರ್ಧೆ ಮಾಡಲು ಆಹ್ವಾನಿಸಿದ್ದೇವೆ ಎಂದು ಸಚಿವ ರೇವಣ್ಣ ಹೇಳಿದ್ದು, ಇದರಿಂದ ಪ್ರಜ್ವಲ್ ಹಾಸನ ಕಣದಿಂದ ಹಿಂದೆ ಸರಿಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.  

ಸಾರಾ ಒಳ ಏಟು : ಸಿದ್ದರಾಮಯ್ಯ ತಿರುಗೇಟು

ಹಾಸನದಿಂದಲೇ‌‌‌ ಸ್ಪರ್ಧಿಸಿ ಎಂದು ನಾನು, ಪ್ರಜ್ವಲ್ ಎಲ್ಲರೂ ಹೇಳುತ್ತಿದ್ದೇವೆ. ಅರವತ್ತು ವರ್ಷದ ರಾಜಕೀಯವನ್ನು ಇಲ್ಲಿಯೇ ಪೂರೈಸಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ. ಆದರೆ ಎಲ್ಲಿ ನಿಲ್ಲುತ್ತಾರೆ ಎನ್ನುವುದನ್ನು ಪಕ್ಷದ ಮುಖಂಡರು ಕುಳಿತು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. 

ಸುವರ್ಣ ಸ್ಪೆಷಲ್: ಶಿವಮೊಗ್ಗ ಶಿಕಾರಿಗೆ ಹೊರಟ ಡಿ.ಕೆ.ಶಿವಕುಮಾರ್

 ಬೆಂಗಳೂರು ಉತ್ತರ, ತುಮಕೂರಿನಲ್ಲಿ ಸ್ಪರ್ಧೆಗೆ ಕಾಂಗ್ರೆಸ್ ನಾಯಕರು ಅಡ್ಡಗಾಲು ಹಾಕುತ್ತಿದ್ದು, ಈ ಬಗ್ಗೆ ಪರೋಕ್ಷ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.  ದೇವೇಗೌಡರು ಎಲ್ಲಿ ನಿಂತರೂ ಗೆದ್ದು ಬರೋ ಶಕ್ತಿ ಇದೆ. ಜನತೆಯ ಆಶಿರ್ವಾದ ಇರುವವರೆಗೂ ಅವರು ಗೆದ್ದು ಬರುತ್ತಾರೆ. ಈ‌ ರಾಜ್ಯಕ್ಕೆ ‌60 ವರ್ಷ ಅವರದೇ ಆದ ಕೊಡುಗೆ ಕೊಟ್ಟಿದ್ದಾರೆ.  ನೀರಾವರಿ ಯೋಜನೆಗಳು‌ ಸೇರಿದಂತೆ ಸಮಗ್ರ ಅಭಿವೃದ್ಧಿ ಗೆ ಆದ್ಯತೆ ನೀಡಿದ್ದರು ಎಂದು ಹೇಳಿದರು. 

ಅಲ್ಲದೇ ಇದೇ ವೇಳೆ ಬಿಜೆಪಿ ಮುಖಂಡರ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ಕಿಡಿಕಾರಿದರು. ಇನ್ನು ಗೌಡರಿಗೆ ಹಾಸನದಿಂದಲೇ ಸ್ಪರ್ಧೆ ಮಾಡಲು ಆಹ್ವಾನಿಸಿದ್ದೇವೆ ಎಂದು ಹೇಳಿದ್ದಕ್ಕೆ ಪ್ರಜ್ವಲ್ ರೇವಣ್ಣ ಕೂಡ ಸಹಮತ ಸೂಚಿಸಿದರು. 

ಪ್ರಜ್ವಲ್ ಪ್ರತಿಕ್ರಿಯೆ : ಸ್ವ ಕ್ಷೇತ್ರ ಹಾಸನವನ್ನು ಜೆಡಿಎಸ್ ಮುಖಂಡ ದೇವೇಗೌಡ ಅವರು ರೇವಣ್ಣ ಪುತ್ರ ಪ್ರಜ್ವಲ್ ಗೆ ಬಿಟ್ಟು ಕೊಟ್ಟಿದ್ದಾರೆ. ಆದರೆ ಇದೀಗ  ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡುವುದಾದರೆ ಸಂತೋಷದಿಂದ ಸ್ವಾಗತಿಸುತ್ತೇನೆ ಎಂದು ಸ್ವತಃ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. 

ಸ್ಪರ್ಧಿಸಲಿ, ಸ್ಪರ್ಧಿಸದೇ ಇರಲಿ ಈಗ ಮಾಡುತ್ತಿರುವ ಕೆಲಸಕ್ಕಿಂತ ನಾಲ್ಕು ಪಟ್ಟು ಹೆಚ್ಚು ಕೆಲಸ ಮಾಡುತ್ತೇನೆ.  ಆರು ಲಕ್ಷ ಮತಗಳ ಅಂತದಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹಾಸನದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹಾಸನದಿಂದಲೇ ದೇವೇಗೌಡರನ್ನ ಸ್ಪರ್ದೆಮಾಡುವಂತೆ ಮನವಿ ಮಾಡಿದ್ದೇವೆ  ಎಂದ ರೇವಣ್ಣ ಅವರ ಮಾತಿಗೆ ಸ್ವತಃ ಪ್ರಜ್ವಲ್ ಕೂಡ ಧ್ವನಿಗೂಡಿಸಿದ್ದಾರೆ. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ.