ನಮಗೆ ಅಲಿ, ಭಜರಂಗ ಬಲಿ ಸಾಕು ಅನಾರ್ಕಲಿ ಬೇಕಿಲ್ಲ| ಜಯಪ್ರದಾ ಬಗ್ಗೆ ಆಜಂ ಪುತ್ರ ವ್ಯಂಗ್ಯ
ಲಖನೌ[ಏ.23]: ರಾಂಪುರ ಬಿಜೆಪಿ ಅಭ್ಯರ್ಥಿ ಜಯಪ್ರದಾ ಕುರಿತು ಕೀಳು ಹೇಳಿಕೆಯನ್ನು ಸಮಾಜವಾದಿ ಪಕ್ಷದ ನಾಯಕರು ಮುಂದುವರಿಸಿದ್ದಾರೆ.
ಜಯಾಪ್ರದಾ ಒಳವಸ್ತ್ರದ ಬಗ್ಗೆ ಆಜಂ ಖಾನ್ ಕೀಳು ಹೇಳಿಕೆ: ಭಾರೀ ವಿವಾದ
‘ನಮಗೆ ಅಲಿ, ಭಜರಂಗಬಲಿ ಸಾಕು. ಅನಾರ್ಕಲಿ ನಮಗೆ ಬೇಡ’ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆಜಂ ಖಾನ್ ಪುತ್ರ ಅಬ್ದುಲ್ಲಾ ಆಜಂ ವ್ಯಂಗ್ಯವಾಡಿದ್ದಾರೆ. ಈ ಮೂಲಕ ನಟಿ ಜಯಪ್ರದಾರನ್ನು ಮೊಘಲರ ಆಸ್ಥಾನದಲ್ಲಿ ನರ್ತಕಿಯಾಗಿದ್ದ ಅನಾರ್ಕಲಿಗೆ ಹೋಲಿಸಿದ್ದಾರೆ. ಈ ಹೇಳಿಕೆ ಬಗ್ಗೆ ಜಯಪ್ರದಾ ಕಿಡಿಕಾರಿದ್ದಾರೆ.
Scroll to load tweet…
ಇದು ತಂದೆ- ಮಕ್ಕಳ ಸಂಸ್ಕೃತಿ ಮತ್ತು ಅವರು ಮಹಿಳೆಯರನ್ನು ಯಾವ ರೀತಿ ನೋಡುತ್ತಾರೆ ಎಂಬುದನ್ನು ತೋರ್ಪಡಿಸುತ್ತದೆ ಟೀಕಿಸಿದ್ದಾರೆ. ಇತ್ತೀಚಿಗೆ ಆಜಂ ಖಾನ್ ಅವರು ಜಯಪ್ರದಾ ‘ಖಾಕಿ ಒಳವಸ್ತ್ರ’ ಧರಿಸಿದ್ದಾರೆ ಎಂದಿದ್ದರು.
