ರಾಂಪುರ[ಏ.15]: ಕೀಳು ಮಾತುಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌, ಮತ್ತೊಮ್ಮೆ ತಮ್ಮ ನಾಲಗೆಯನ್ನು ಮನಬಂದಂತೆ ಹರಿಯಬಿಟ್ಟಿದ್ದಾರೆ.

ರಾಂಪುರದಲ್ಲಿ ತಮ್ಮ ಪ್ರತಿಸ್ಪರ್ಧಿ ಜಯಪ್ರದಾ ಬಗ್ಗೆ ಮಾತನಾಡುವ ವೇಳೆ ಅವರ ಬಳಸಿದ ಕೀಳುಪದವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದಲೇ ವಜಾಮಾಡಬೇಕೆಂಬ ಭಾರೀ ಒತ್ತಾಯ ಕೇಳಿಬಂದಿದೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಜಂ ಖಾನ್‌, 17 ವರ್ಷಗಳ ಹಿಂದೆ ನಾನು ಜಯಪ್ರದಾರನ್ನು ಈ ಕ್ಷೇತ್ರಕ್ಕೆ ಕರೆತಂದಿದ್ದೆ. ಇಷ್ಟು ವರ್ಷ ಯಾರಿಗೂ ಆಕೆಯನ್ನು ಮುಟ್ಟಲು ಬಿಟ್ಟಿರಲಿಲ್ಲ. ಆದರೆ 17 ದಿನಗಳ ಹಿಂದೆ ಆಕೆ ಖಾಕಿ ಒಳವಸ್ತ್ರ ತೊಟ್ಟಿದ್ದು ಗೊತ್ತಾಯ್ತು ಎಂದಿದ್ದಾರೆ.

ಜಯಪ್ರದ ಬಿಜೆಪಿ ತೆಕ್ಕೆಗೆ: ಅಮರ್ ಸಿಂಗ್ ನಗುತ್ತಿದ್ದಾರೆ ಮೆತ್ತಗೆ!

ಈ ಮೂಲಕ ಜಯಾ ಬಿಜೆಪಿ ಸೇರ್ಪಡೆಯನ್ನು ವ್ಯಂಗ್ಯವಾಡಿದ್ದಾರೆ. ಅವರ ಈ ಕೀಳು ಹೇಳಿಕೆ ಬಗ್ಗೆ ಆನ್‌ಲೈನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.