ಮತದಾನಕ್ಕೆ ಚಕ್ಕರ್ ಹಾಕಿದ್ರೆ ಸಿಗಲ್ಲ ಇಲ್ಲಿ ಊಟ, ತಿಂಡಿ!

ಗೋಕರ್ಣದ ಪೈ ರೆಸ್ಟೊರೆಂಟ್‌ನಿಂದ ಮತ ಜಾಗೃತಿ: ಮತದಾನಕ್ಕೆ ಚಕ್ಕರ್ ಹಾಕಿದ್ರೆ ಸಿಗಲ್ಲ ಇಲ್ಲಿ ಊಟ, ತಿಂಡಿ!

Voting awareness by pai restaurant at gokarna

ಕಾರವಾರ[ಮಾ.28]: ಮತದಾನದ ಸಂದರ್ಭದಲ್ಲಿ ಸಾಲು ಸಾಲಾಗಿ ರಜೆ ಬಂದಿದ್ದರಿಂದ ಮತದಾನಕ್ಕೆ ಚಕ್ಕರ್ ಹಾಕಿ ಗೋಕರ್ಣಕ್ಕೇನಾದರೂ ಬರುವ ಪ್ಲ್ಯಾನ್ ಹಾಕಿದ್ದೀರಾ? ಹಾಗೇನಾದರೂ ಬಂದರೆ ಇಲ್ಲಿನ ಪ್ರಮುಖ ಹೋಟೆಲೊಂದರಲ್ಲಿ ನಿಮಗೆ ಊಟ, ತಿಂಡಿ ಸಿಗುವುದಿಲ್ಲ!

ಹೌದು, ಮತದಾನದ ಬಗ್ಗೆ ಜಾಗೃತಿಗಾಗಿ ಗೋಕರ್ಣದ ಮುಖ್ಯ ರಸ್ತೆಯಲ್ಲಿರುವ ‘ಪೈ ರೆಸ್ಟೊರೆಂಟ್’ ಮಾಲೀಕ ವಾಮನ ಪೈ ಹೋಟೆಲ್ ಮುಂದೆ ಇಂತಹ ಫ್ಲೆಕ್ಸ್ ಹಾಕಿದ್ದಾರೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ನಮಗೆ ಲಾಭ. ಆದರೆ, ಮತದಾನ ಮಾಡದಿದ್ದರೆ ದೇಶಕ್ಕೆ ಹಾನಿಯಾಗುತ್ತದೆ. ನಮಗೆ ಹಾನಿಯಾದರೂ ಪರವಾಗಿಲ್ಲ. ದೇಶಕ್ಕೆ ಹಾನಿ ಆಗಬಾರದು ಎಂಬ ಹಿನ್ನೆಲೆಯಲ್ಲಿ ಫ್ಲೆಕ್ಸ್ ಹಾಕಿದ್ದಾಗಿ ವಾಮನ ಪೈ ಹೇಳುತ್ತಾರೆ.

ಫ್ಲೆಕ್ಸ್‌ನಲ್ಲಿ ಏನಿದೆ?:

‘ಲೋಕಸಭಾ ಚುನಾವಣೆ ಪ್ರಯುಕ್ತ ಕರ್ನಾಟಕದಲ್ಲಿ ಮತದಾನ ನಡೆಯಲಿರುವ ಏ.18 ಹಾಗೂ 23 ರಂದು ಮತದಾನ ತಪ್ಪಿಸಿ ಗೋಕರ್ಣ ಪ್ರವಾಸಕ್ಕೆ ಬಂದವರಿಗೆ ನಮ್ಮ ಹೋಟೆಲ್‌ನಲ್ಲಿ ಊಟ, ಉಪಾಹಾರ ನೀಡಲಾಗುವುದಿಲ್ಲ. ದಯಮಾಡಿ ನಿಮ್ಮ ಸ್ಥಳದಲ್ಲಿಯೇ ಇದ್ದು ಮತದಾನದ ಗಂಭೀರತೆ ಅರಿತು ನವ ಭಾರತಕ್ಕಾಗಿ ಮತದಾನ ಮಾಡಿ’ ಎಂದು ಬೋರ್ಡ್‌ನಲ್ಲಿ ಬರೆಯಲಾಗಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Latest Videos
Follow Us:
Download App:
  • android
  • ios