Asianet Suvarna News Asianet Suvarna News

BSYಗೆ ವಿರುದ್ಧ ಸ್ಪರ್ಧಿಸಿದ್ದ ವಿನಯ್ ಈಗ ಲೋಕ ಸಮರದಲ್ಲಿ 'ಚಿಲ್ಲರೆ ಗಿರಾಕಿ'

ಅಂದು ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಲು ಕಾಪ್ಟರ್ ನಲ್ಲಿ ಬಂದಿದ್ದ ವಿನಯ್| ಇಂದು ಲೋಕಸಭಾ ಸಮರಕ್ಕೆ 'ಚಿಲ್ಲರೆ ಗಿರಾಕಿ' ಗೆಟಪ್!

vinay Who came with BSY in helicopter files his nomination for loksabha in a different way
Author
Bangalore, First Published Apr 5, 2019, 12:16 PM IST

ಶಿವಮೊಗ್ಗ[ಏ.05]: ಯಾರಾದ್ರೂ ಅಷ್ಟೋ ಇಷ್ಟೋ ಚಿಲ್ಲರೆ ಹಣ ಜೇಬಿನಲ್ಲಿ ಇಟ್ಟುಕೊಂಡಿದ್ದರೆ ಅವರನ್ನು ಸಾಮಾನ್ಯವಾಗಿ ತಮಾಷೆಗಾಗಿ ಚಿಲ್ರೆ ಗಿರಾಕಿ ಅಂತಾರೆ.  ಆದರೆ, ಇಲ್ಲೊಬ್ಬ ಭೂಪ ಅದೇ ಚಿಲ್ಲರೆಯನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆ. 

ಹೀಗೆ ಈ  ಬಾರಿ ಎಲೆಕ್ಷನ್ ಗೆ ಸ್ಪರ್ಧಿಸುತ್ತಿರುವಾತನ ಹೆಸರು ವಿನಯ್ ರಾಜಾವತ್.  ಈತ ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಹೆಲಿಕಾಪ್ಟರ್ ನಲ್ಲಿ ಶಿಕಾರಿಪುರಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಿ ಕೇವಲ 400 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ವಿಭಿನ್ನವಾಗಿ ಚುನಾವಣಾ ಕಣಕ್ಕಿಳಿದಿದ್ದಾನೆ.  ಇದಕ್ಕಾಗಿ ವಿನಯ್ ಕೇವಲ 1 ರೂ. ಹಾಗೂ 2 ರೂ. ಗಳ ಚಿಲ್ಲರೆ ನಾಣ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬಂದು, ತನ್ನ ಉಮೇದುವಾರಿಕೆ ಸಲ್ಲಿಸಿ, ಹಣವನ್ನು ಡಿಪಾಸಿಟ್ ಮಾಡಿದ್ದಾನೆ.  

12,500 ರೂ. ಗಳ ಚಿಲ್ಲರೆ ಹಣವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಂದ ಈತನನ್ನು ಸಾರ್ವಜನಿಕರು, ಪೊಲೀಸರು, ಬೆಕ್ಕಸ ಬೆರಗಾಗಿ ನೋಡುತ್ತಿದ್ದರು.  ಚಿಲ್ಲರೆಯನ್ನ ತೋರಿಸಿದ ಈತ, ಆ ಚೀಲವನ್ನ ಎತ್ತಿಕೊಂಡು ಹೋಗಿ ಜಿಲ್ಲಾಧಿಕಾರಿಗಳ ಮುಂದೆ ಇಟ್ಟಿದ್ದಾನೆ. ಬಳಿಕ ಪಕ್ಷೇತರನಾಗಿ ತನ್ನ ಉಮೇದುವಾರಿಕೆ ಸಲ್ಲಿಸಿದ್ದಾನೆ.  

ಈತನ ವರ್ತನೆಗೆ ಜಿಲ್ಲಾಧಿಕಾರಿಗಳೇ ಆಶ್ಚರ್ಯಗೊಂಡು ನಗುಮೊಗದಿಂದಲೇ ಅದನ್ನು ಸ್ವೀಕರಿಸಿದ್ದಾರೆ.  ಅಂದಹಾಗೆ, ಈ ವಿನಯ್ ರಾಜಾವತ್ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಎತ್ತಿನ ಗಾಡಿಯಲ್ಲಿ  ಡಿಫ್ರೆಂಟ್ ವೇಷ ಭೂಷಣದಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾನೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios