ಅಪ್ಪನ ಪರ ಮತಯಾಚನೆಗೆ ಹೋದ ರಶ್ಮಿ ಮೊಯ್ಲಿಗೆ 'ನೀರಿ'ಳಿಸಿದ ಜನ!
ಅಪ್ಪನ ಪರ ಮತಯಾಚನೆಗೆ ಬಂದಿದ್ದ ರಶ್ಮಿ ಮೊಯ್ಲಿ ಅವರನ್ನು ಜನರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತಯಾಚನೆಗೆ ಹೋದಾಗ ಜನರು ತಿರುಗಿ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ(ಏ. 15) 5 ವರ್ಷದಿಂದ ನೀರು ಅಲ್ಲೇ ಇದೆ. ನೀವು ಈಗ ಮತ ಕೇಳಲು ಬಂದಿದ್ದೀರಾ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ, ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಮಗಳು ರಶ್ಮಿ ಮೊಯ್ಲಿ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಪ್ಪನ ಪರ ಮತಯಾಚನೆಗಿಳಿದ ರಶ್ಮಿ ಮೊಯ್ಲಿಗೆ ಶಾಕ್ ಕಾದಿತ್ತು. ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲಿ ಮತಯಾಚನೆಗೆ ತೆರಳಿದ ರಶ್ಮಿ ತಂದೆಗೆ ಮತ ಹಾಕುವಂತೆ ಕೇಳಿಕೊಳ್ಳುತ್ತಿದ್ದರು. ಎತ್ತಿನಹೊಳೆ ನೀರು ಎಲ್ಲಿ? ಎಂದು ಮತದಾರರು ಪ್ರಶ್ನೆ ಮಾಡಿದ್ದಾರೆ. 5 ವರ್ಷದಿಂದ ನೀರು ಅಲ್ಲೇ ಇದೆ ಮುಂದಕ್ಕೆ ಬರಲೇ ಇಲ್ಲ ಎಂದು ವ್ಯಂಗ್ಯವಾಗಿಯೇ ಪ್ರಶ್ನೆ ಮಾಡಿದರು.
'ಗೃಹ ಸಚಿವ ಎಂಬಿ ಪಾಟೀಲ್ ಹುಚ್ಚಾಸ್ಪತ್ರೆಗೆ ದಾಖಲಾಗಲಿ'
ನಾವು ಧರ್ಮಸ್ಥಳದ ಕಡೆಗೆ ಹೋದಾಗಲೆಲ್ಲಾ ನೋಡುತ್ತೇನೆ. ಸಿದ್ರಾಮಯ್ಯ ಸಿಎಂ ಆಗಿದ್ದಾಗಲೇ ಮಾಡಬಹುದಿತ್ತು ಮನಸ್ಸು ಮಾಡಿದ್ರೇ ಇಷ್ಟೊತ್ತಿಗೆ ನೀರು ಕೊಡಬಹುದಿತ್ತು. ಆದ್ರೆ ಈಗ ಏನು ಮಾಡೋಕೆ ಆಗುತ್ತದೆ ಎಂದು ಜನರು ಪ್ರಶ್ನೆ ಮಾಡಿದ್ದಕ್ಕೆ ರಶ್ಮಿ ಬಳಿ ಉತ್ತರ ಇರಲಿಲ್ಲ.