ಕಾರವಾರ[ಮಾ. 22]  ನಾಪತ್ತೆಯಾದ ಮೀನುಗಾರರು ಪತ್ತೆಯಾಗದ ಕಾರಣಕ್ಕೆ ಉತ್ತರಕನ್ನಡ ಮೀನುಗಾರರು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನ ಮಾಡಿದ್ದಾರೆ.

2018ರ  ಡಿಸೆಂಬರ್  13ಕ್ಕೆ ಸುವರ್ಣ ತ್ರಿಭುಜ ಭೋಟ್ ನಾಪತ್ತೆಯಾಗಿತ್ತು. ಉತ್ತರಕನ್ನಡದ 5, ಉಡಪಿಯ 2 ಇಬ್ಬರೂ ಮೀನುಗಾರರು ನಾಪತ್ತೆಯಾಗಿದ್ದು ಇನ್ನು  ಯಾವ ಸುಳಿವು ಸಿಕ್ಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮಸ್ಯೆಗೆ ಸ್ಪಂದಿಸದ ಕಾರಣ ಚುನಾವಣೆ ಬಹಿಷಷ್ಟಾರ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ. 

ನಾಪತ್ತೆಯಾದ ಮೀನುಗಾರರ ಸುವರ್ಣ ತ್ರಿಭುಜ ಬೋಟ್

ಈ ಬಗ್ಗೆ ಚರ್ಚೆ ಮಾಡಲು  ಮಾರ್ಚ್ 25ರಂದು ಮೀನುಗಾರರು ಸಭೆ ಸೇರಲಿದ್ದಾರೆ. ಉತ್ತರ  ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನಂತ್ ಕುಮಾರ್  ಹೆಗಡೆ ಕಣಕ್ಕೆ ಇಳಿದರೆ ದೋಸ್ತಿಗಳಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆನಂದ್ ಅಸ್ನೋಟಿಕರ್ ಸ್ಪರ್ಧೆ ಒಡ್ಡಲಿದ್ದಾರೆ. ಏಪ್ರಿಲ್ 23 ರಂದು ಮತದಾನ ನಡೆಯಲಿದೆ.