ಚಿಕ್ಕಮಗಳೂರು[ಏ.18]  ಮತದಾನ ಮಾಡದೆ ಪ್ರವಾಸಕ್ಕೆ ಬಂದ ಖಾಸಗಿ ಕಂಪನಿಯ ಪ್ರವಾಸಿಗಳಿಗೆ ಡಿಫರೆಂಟ್ ಸನ್ಮಾನ ಮಾಡಲಾಗಿದೆ.

ಬೆಂಗಳೂರಿನ ಶಿವಾಜಿ ನಗರದ ನಿವಾಸಿಗಳಾದ ಖಾಸಗಿ ಕಂಪನಿಯ ಉದ್ಯೋಗಿಗಳು ಮತ ಹಾಕದೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದರು. ಇವರನ್ನು ಸ್ಚಚ್ ಟ್ರಸ್ಟ್  ಮತ್ತು ಚಿಕ್ಕಮಗಳೂರು ಪತ್ರಕರ್ತರ ಸಂಘದ ಸದಸ್ಯರು ನಗರದ ಮಾಗಡಿ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಚಾರಿಸಿದ್ದಾರೆ.

ಮತದಾನಕ್ಕೆ ಅವಕಾಶಕೊಟ್ಟ ಮಳೆರಾಯನಿಗೆ ಥ್ಯಾಂಕ್ಸ್...

ಮತದಾನ ಮಾಡದಿರುವುದು ಗೋತ್ತಾದ ತಕ್ಷಣ ಇವರಿಗೆ ಶಾಲ್ ಹಾಗೂ ಆಧಾರ್ ಖಾರ್ಡ್ ,ಪಾನ್ ಕಾರ್ಡ್, ರೇಷನ್ ಕಾರ್ಡ ಪ್ರತಿಯ ಮಾಲೆ ಹಾಕಿ ಸನ್ಮಾನಿಸಿದ್ದಾರೆ.

ಸಹ ಮತ ಚಲಾಯಿಸಿಲ್ಲ ಎಂದು ಗೊತ್ತಾದ ತಕ್ಷಣ ಸಂಘದ ಸದಸ್ಯರು ಗುಲಾಬಿ ಹೂವು ಕೊಟ್ಟು ಸನ್ಮಾನ ಮಾಡುತ್ತಿದಂತೆ ಪ್ರವಾಸಿಗರು  ಮುಜುಗರಕೊಳಗಾದರು. ನಿಮಗೆ ಯಾವುದೇ ಪಕ್ಷ ಇಷ್ಟವಿಲ್ಲಂದ್ರೆ ನೋಟಾಕ್ಕೆ ಮತದಾನ ಮಾಡಿ. ಇನ್ನೊಬ್ಬರಿಗೆ ಮಾದರಿಯಾಗುವ ಯುವಕರೇ ಈ ರೀತಿ ಮಾಡಿದ್ರೆ ಹೇಗೆ ಎಂದು ಸಂಘಟನೆಯವರು ಪ್ರಶ್ನೆ ಮಾಡಿದಾಗ ಇನ್ನು ಮೇಲೆ ಈ ರೀತಿಯ ತಪ್ಪು ಮಾಡಲ್ಲ ಎಂದ ನಂತರ ಅವರನ್ನು ಮುಂದಕ್ಕೆ ಬಿಡಲಾಯಿತು.