ಬೆಂಗಳೂರು[ಏ. 18] ಮತದಾನ ಸಂಜೆ 6 ಗಂಟೆಗೆ ಮುಗಿಯುತ್ತಿರುವ ವೇಳೆ ಕೆಲವರು ಸರತಿ ಸಾಲಿನಲ್ಲಿ ಇದ್ದಾಗಲೆ ಮಳೆ ಸುರಿದಿದೆ. 

ರಾಜ್ಯದ ದಕ್ಷಿಣ ಭಾಗದ 14 ಕ್ಷೇತ್ರಗಳಲ್ಲಿಯೇ ಮತದಾನ ಇತ್ತು.. ಮಳೆ ಸಹ ರಾಜ್ಯದ ದಕ್ಷಿಣ ಒಳನಾಡಿನಲ್ಲಿಯೇ ಸುರಿದಿದೆ. ಬಿಸಿಲಿನ ಧಗೆ ಒಂದು ಕಡೆ ಕಡಿಮೆಯಾದರೆ ಇನ್ನೊಂದು ಕಡೆ ಎಲೆಕ್ಷನ್ ಬಿಸಿಯೂ  ಕಡಿಮೆಯಾಯಿತು. 

ಚುನಾವಣೆಗೂ ಮುನ್ನ ಬೆಂಗಳೂರಿನ ಮಳೆ ಮಾಡಿದ ಅನಾಹುತಗಳು

ಬೆಂಗಳೂರು, ಚಾಮರಾಜನಗರ, ಮೈಸೂರು ಸೇರಿದಂತೆ ಹಲವು ಕಡೆ ಸಂಜೆ ಮಳೆ ಸುರಿದಿದೆ. ಮಧ್ಯಾಹ್ನ ಅಥವಾ ಸಂಜೆ ಮಳೆ ಸುರಿಯಬಹುದು ಎಂಧು ಹವಾಮಾನ ಇಲಾಖೆ ಮೊದಲೆ ಎಚ್ಚರಿಸಿತ್ತು.