ಚೆನ್ನೈ/ಮಧುರೈ: ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ತಮಿಳು ನಾಡಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ರಾಜ್ಯಜ ನಾಗರಕೊಯ್ಲಿಗೆ ಆಗಮಿಸುತ್ತಿರುವ ರಾಹುಲ್ ವಿರುದ್ಧ #GoBackRahul ಹ್ಯಾಷ್‌ ಟ್ಯಾಗ್‌ನಲ್ಲಿ ಟ್ವೀಟ್ ಅಭಿಯಾನವನ್ನು ತಮಿಳರು ಆರಂಭಿಸಿದ್ದಾರೆ. ಉಗ್ರ ಮೌಲಾನಾ ಮಸೂಮ್ ಅಜರ್‌ನನ್ನು 'ಜೀ' ಎಂದು ಸಂಭೋದಿಸಿದ್ದಕ್ಕೆ ಸೇರಿ, ಹಲವು ವಿಷಯಗಳಿಗಾಗಿ ರಾಹುಲ್ ವಿರುದ್ಧ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ನಾಗರಕೋಯ್ಲಿಯಲ್ಲಿ ಯುಪಿಎ ಪರ ಪ್ರಚಾರ ಆರಂಭಿಸಲು ರಾಹುಲ್‌ ತಮಿಳುನಾಡಿಗೆ ತೆರಳುತ್ತಿದ್ದಾರೆ.

ವಿಧವಿಧವಾಗಿ ರಾಹುಲ್ ಕಾಲೆಳೆದ ತಮಿಳರು, #GoBackRahul ಎಂಬ ಹ್ಯಾಷ್ ಟ್ಯಾಗ್‌ನಡಿ ಟ್ವೀಟ್ ಮಾಡುತ್ತಿದ್ದು, ವಿಶ್ವದ್ಯಾಂತ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿ ಅಕಸ್ಮಾತ್ ಪ್ರಧಾನಿಯಾದರೆ ಏನಾಗುತ್ತದೆ ಎಂದು ಟ್ವೀಟ್ ಮಾಡಿದ ಜಾಲತಾಣಿಗರು, 'ಭಾರತೀಯರಾಗಿ ರೋಹಿಂಗ್ಯಾಗಳು ಮತದಾನ ಮಾಡಲು ಆರಂಭಿಸುತ್ತಾರೆ. ಪಾಕಿಸ್ತಾನ ಹೆಚ್ಚು ಹೆಚ್ಚು ಉಗ್ರರನ್ನು ಭಾರತಕ್ಕೆ ರಫ್ತು ಮಾಡುತ್ತದೆ. ಭಾರತೀಯ ಸೇನೆ ಸ್ತಬ್ಧವಾಗುತ್ತದೆ. ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯರನ್ನು ಮರಳಿ ತರುವ ಯಾವುದೇ ಯತ್ನ ನಡೆಯುವುದಿಲ್ಲ, ಗಡಿ ಭಾಗವನ್ನು ಚೀನಾ ಆಕ್ರಮಿಸಿಕೊಳ್ಳಲಿದೆ,' ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ಮೊದಲ ಟ್ವೀಟ್ ಮಾಡಿದ ಪ್ರಿಯಾಂಕಾ ಗಾಂಧಿ

ದಕ್ಷಿಣ ಭಾರತಕ್ಕೆ ಪ್ರಧಾನಿಯಾದರೆ ರಾಹುಲ್ ಕೊಡುಗೆ ಏನಾಗಲಿದೆ ಎಂಬ ಪ್ರಶ್ನೆಗೂ ರಾಹುಲ್ ತುಂಬಾ ನೀರಸವಾಗಿ ಪ್ರತಿಕ್ರಿಯೆಸಿದ್ದಾರೆಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾದಲ್ಲಿರುವ ತಮಿಳರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ತಮಿಳರು ಮರೆಯುವುದಿಲ್ಲವೆಂದೂ ಹೇಳಿದ್ದಾರೆ.

ಈ ಹಿಂದೆ ಪ್ರಧಾನಿ ಮೋದಿ ಚೆನ್ನೈಗೆ ಭೇಟಿ ನೀಡಿದಾಗಲೂ #GoBackModi ಟ್ವೀಟ್ ಟ್ರೆಂಡಿಂಗ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಲ್ಲಿವೆ #GoBackRahul ಹ್ಯಾಷ್ ಟ್ಯಾಗ್‌ನಲ್ಲಿರುವ ಕೆಲವು ಟ್ವೀಟ್‌ಗಳ ಝಲಕ್...