ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇದೇ ಮೊದಲ ಬಾರಿಗೆ ಟ್ವೀಟ್ ಮಾಡಿದ್ದಾರೆ. ಏನು ಹೇಳಿದ್ದಾರೆ. ಹೇಗೆ ಸಿಕ್ಕಿದೆ ಪ್ರತಿಕ್ರಿಯೆ? ಸುದ್ದಿ ಓದಿ...

ಹೊಸದಿಲ್ಲಿ: ಸಕ್ರಿಯ ರಾಜಕಾರಣ ಪ್ರವೇಶಿಸಿದ ನಂತರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯೇ ತಿಂಗಳ ಹಿಂದೆ ಟ್ವೀಟ್ ಖಾತೆ ತೆರೆದಿದ್ದರು. ಆದರೆ, ಯಾವುದೇ ಟ್ವೀಟ್ ಮಾಡಿರಲಿಲ್ಲ. ಇದೀಗ ಮೊದಲ ಟ್ವೀಟ್ ಮಾಡಿದ್ದು, ಭಾರೀ ಪ್ರತಿಕ್ರಿಯೆ ಲಭ್ಯವಾಗಿದೆ.

Scroll to load tweet…

ಮೋದಿ ತವರಲ್ಲಿ ಮೊದಲ ರಾಜಕೀಯ ಭಾಷಣ ಮಾಡಿದ ಪ್ರಿಯಾಂಕಾ ಅಹ್ಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಗಾಂಧಿ ಆಶ್ರಮದ ಫೋಟೋ ಪೋಸ್ಟ್ ಮಾಡಿ, 'ಸಾಬರಮತಿಯ ಸರಳ ಘನತೆಯಲ್ಲಿ ಸತ್ಯ ಜೀವಂತವಾಗಿದೆ....' ಎಂದು ಟ್ವೀಟ್ ಮಾಡಿದ್ದು, 9 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ. 32 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 4 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ತೋರಿದ್ದಾರೆ. 

Scroll to load tweet…

ಮತ್ತೊಂದು ಟ್ವೀಟ್‌ನಲ್ಲಿ ಗಾಂಧೀಜಿಯ ಅಹಿಂಸಾ ತತ್ವದ ಕೋಟ್‌ವೊಂದನ್ನು ಶೇರ್ ಮಾಡಿದ್ದಾರೆ ಪ್ರಿಯಾಂಕಾ ಗಾಂಧಿ.

ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ದೇಶದಲ್ಲಿ ಏಳು ಹಂತಗಳಲ್ಲಿ ನಡೆಯುವ ಲೋಕ ಸಮರಕ್ಕೆ ಸಿದ್ಧತೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಹಾಗೂ 23 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 23ಕ್ಕೆ ಮತ ಎಣಿಕಾ ಕಾರ್ಯ ನಡೆಯಲಿದೆ.