ಮಂಡ್ಯ, [ಮಾ.22]:  ಮಂಡ್ಯ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಸ್ಟಾರ್ ನಟರ ಬೆಂಬಲ ಮಾತ್ರವಲ್ಲದೇ ರೈತರ ಪಕ್ಷದ ಬೆಂಬಲ ಸಿಕ್ಕಿದೆ. ಈ ಮೂಲಕ ಸುಮಲತಾ ಅಂಬರೀಶ್ ಅವರಿಗೆ ಮಂಡ್ಯದಲ್ಲಿ ಮತ್ತಷ್ಟು ಬಲ ಬಂದಂತಾಗಿದೆ.

ಇಂದು [ಶುಕ್ರವಾರ] ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿರುವ ನಿವಾಸಕ್ಕೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ನಿವಾಸಕ್ಕೆ ಸುಮಲತಾ ಭೇಟಿ ನೀಡಿದರು. ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಪುಟ್ಟಣ್ಣಯ್ಯ ಪತ್ನಿ ಸುನೀತಾ ಪುಟ್ಟಣ್ಣಯ್ಯ ಅವರಲ್ಲಿ ಸುಮಲತಾ ಅಂಬರೀಶ್ ಮನವಿ ಮಾಡಿದರು.

ಕೇಬಲ್ ಕಟ್ ಮಾಡೋದಲ್ಲ, ಮುಂದಿನಿಂದ ಬಂದು ಯುದ್ಧ ಮಾಡಿ: ಸುಮಾ ಸವಾಲು

ಮಾತುಕತೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಸುನೀತಾ ಪುಟ್ಟಣ್ಣಯ್ಯ, ' ಸುಮಲತಾ ಅವರಿಗೆ ಬೆಂಬಲ ಕೊಡಲು ಮನಸ್ಸು ಮಾಡಿದ್ದೇವೆ.  ಈ ಬಗ್ಗೆ ಮಾರ್ಚ್ 24ರಂದು ಸ್ವರಾಜ್ ಇಂಡಿಯಾ ಪಕ್ಷದ ಸಭೆ ನಡೆಸಿ ಬೆಂಬಲ ಕೊಡುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿಯಿಂದ ಬೆಂಬಲ

ಸ್ವರಾಜ್ ಇಂಡಿಯಾ ಪಕ್ಷ, ಸುಮಲತಾ ಅವರಿಗೆ ಬೆಂಬಲ ನೀಡುವುದು ಮೇಲ್ನೋಟಕ್ಕೆ ಖಚಿತವಾಗಿದ್ದು, ಈ ಬಗ್ಗೆ ಮಾ.24ಕ್ಕೆ ಅಧಿಕೃತವಾಗಿ ತಿಳಿಯಲಿದೆ. ಒಟ್ಟಿನಲ್ಲಿ ಅಂಬಿ ಫ್ಯಾನ್ಸ್ ಜತೆಗೆ ಸ್ಟಾರ್ ನಟರ ಬೆಂಬಲದಿಂದ ಸುಮಲತಾ ಅಂಬರೀಶ್ ಬಲ ಬಂದಿದೆ. ಇದೀಗ ಸ್ವರಾಜ್ ಇಂಡಿಯಾ ಪಕ್ಷ ಬೆಂಬಲ ನೀಡಲು ಮುಂದಾಗಿದ್ದು, ಸುಮಲತಾ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.