ಮುಂಬೈ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷಗಳು ಬ್ಯುಸಿಯಾಗಿವೆ. ಇನ್ನು ಸಿನಿಮಾ ರಂಗದ ನಟ ನಟಿಯರು ಕೂಡ ರಾಜಕೀಯ ರಂಗಕ್ಕೆ ಧುಮುಕುತಿದ್ದು, ಈ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆಯಾಗುತ್ತಿದೆ. 

ಈಗಾಗಲೇ ಕೆಲ ಬಾಲಿವುಡ್ ನಟ ನಟಿಯರು  ಸ್ಪರ್ಧೆ ಮಾಡುತ್ತಿದ್ದು,  ನಟ ಸನ್ನಿ ಡಿಯೋಲ್ ಬಿಜೆಪಿ ಸೇರ್ಪಡೆಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. 

ಸನ್ನಿ ಡಿಯೋಲ್ ಬಿಜೆಪಿಯಿಂದ ಪಂಜಾಬ್ ನ ಗುರುದಾಸಪುರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ. 

ಪಂಜಾಬಿನಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿರುವ ಡಿಯೋಲ್ ಗೆ ಇದು ರಾಜಕೀಯ ಪ್ರವೇಶಿಸಲು ಸೂಕ್ತ ಸಮಯವಾಗಿದೆ. ಇತ್ತೀಚಿನ ಸನ್ನಿ ಡಿಯೋಲ್ ಚಿತ್ರಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿದ್ದು, ಸದ್ಯ ಬಾಲಿವುಡ್ ನಲ್ಲಿ ಹೆಚ್ಚು ಚಾರ್ಮ್ ಉಳಿಸಿಕೊಳ್ಳದ ಕಾರಣ ರಾಜಕೀಯ ರಂಗದಲ್ಲಿ ಹೆಜ್ಜೆ ಊರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 

ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ಅವರು ಕೂಡ ಬಿಜೆಪಿ ಸದಸ್ಯರಾಗಿದ್ದು, ಧರ್ಮೇಂದ್ರ ಪತ್ನಿ ಹೇಮಮಾಲಿನಿ ಕೂಡ  ಬಿಜೆಪಿ ಸಂಸದೆಯಾಗಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ