ಮಂಡ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಪೈಪೋಟಿ ತಾರಕಕ್ಕೇರಿದೆ. ಪರಸ್ಪರ ಟೀಕೆ-ಪ್ರತಿ ಟೀಕೆಗಳು, ಗಿಮಿಕ್‌ಗಳು ನಡೆಯುತ್ತಿದೆ. 

ಮೈಸೂರು (ಮಾ. 29): ನಿಖಿಲ್‌ ಹೆಸರಲ್ಲಿ ಬೇರೆ ನಿಲ್ಲಿಸುವಂತೆ ನನಗೂ ಕೆಲವರು ಸಲಹೆ ನೀಡಿದ್ದರು. ಆದರೆ ಬೇಡವೆಂದು ನಾನು ಹೇಳಿದ್ದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಟೀಕಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೇಜಸ್ವಿ ಪರ ತೇಜಸ್ವಿನಿ ಪ್ರಚಾರ ಇಲ್ಲ?

ಸುಮಲತಾ ಹೆಸರಿನ ಇನ್ನು 3 ಮಂದಿ ಮಂಡ್ಯ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಕುರಿತು ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಹ ನಿಖಿಲ್‌ ಹೆಸರಿನ 9 ಮಂದಿಯನ್ನು ಕಣಕ್ಕಿಳಿಸಬಹುದಿತ್ತು. ಆದರೆ, ಈ ರೀತಿಯ ಕುತಂತ್ರ ರಾಜಕಾರಣವನ್ನು ನಾನು ಮಾಡಲ್ಲ. ನೇರ ಹೋರಾಟ ಮಾಡುತ್ತೇನೆ. ನಾನು ಅಂಬರೀಷ್‌ ಅವರ ಪತ್ನಿ, ಅವರ ರೀತಿಯೇ ರಾಜಕಾರಣ ಮಾಡುತ್ತೇನೆ ಎಂದರು.

ಪಕ್ಷದಿಂದ ಹೊರ ಹಾಕುವ ಎಚ್ಚರಿಕೆ ನೀಡಿದ ಎಚ್‌ಡಿಡಿ

ದರ್ಶನ್‌ ಮತ್ತು ಯಶ್‌ ಈ ರಾಜ್ಯದ ಆಸ್ತಿ. ಅವರನ್ನು ಅಲ್ಲಿಗೆ ಬರಬೇಡಿ, ಇಲ್ಲಿಗೆ ಹೋಗಬೇಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಮೇ 23ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.