ಮಂಡ್ಯ, [ಮಾ.31]: ಮಂಡ್ಯ ಲೋಕಸಭಾ ಕ್ಷೇತ್ರದ ಕಣದಲ್ಲಿ ದಿನದಿಂದ ದಿನಕ್ಕೆ ಸಿನಿಮೀಯ ಬೆಳವಣಿಗೆಗಳು ನಡೆಯುತ್ತಿವೆ.

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ.

ನಮಗೆ 99 % ನ್ಯಾಯ ಸಿಗಲ್ಲ: ಸಿಎಂ ಮೇಲೆ ಸುಮಲತಾ ಆಕ್ರೋಶ

ಮತ್ತೊಂದು ಕಡೆ ಸಿಎಂ ಕುಮಾರಸ್ವಾಮಿ ಅವರು ತಮ್ಮ ಪುತ್ರನ ಗೆಲುವಿಗಾಗಿ ಅಧಿಕಾರ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುನಮಲತಾ ಅಂಬರೀಶ್ ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚುನಾವನಾಧಿಕಾರಿ [ಮಂಡ್ಯ ಡಿಸಿ] ಮಂಜುಶ್ರೀ ಅವರು ಜೆಡಿಎಸ್ ಪರ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ನಿಖಿಲ್ ನಾಮಪತ್ರದಲ್ಲಿ ದೋಷ ಇದ್ದರೂ ಮಂಜುಶ್ರೀ ಅವರು ಸಿಂಧು ಮಾಡಿದ್ದು, ಸಿಎಂ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ ಅಂತೆಲ್ಲಾ ಆರೋಪಗಳಿವೆ. ಈ ಹಿನ್ನೆಯಲ್ಲಿ ಕೂಡಲೇ ಚುನಾವಣಾಧಿಕಾರಿ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಲಾಗಿದೆ.

ನಿಖಿಲ್ ನಾಮಪತ್ರ ವಿವಾದ: ವರದಿ ಮಂಡ್ಯದಿಂದ ದೆಹಲಿಗೆ ಶಿಫ್ಟ್..!

ಸುಮಲತಾ ಅಂಬರೀಶ್ ಪರವಾಗಿ ಅವರ ಚುನಾವಣೆ ಏಜೆಂಟ್ ಮದನ್ ಅವರು ಮೈಸೂರು ಪ್ರಾದೇಶಿಕ ಚುನಾವಣಾಧಿಕಾರಿಗಳಿಗೆ ಪತ್ರಬರೆದಿದ್ದಾರೆ. ಮಂಡ್ಯ ಡಿಸಿ ವಿರುದ್ಧ ಸಾಲು-ಸಾಲು ದೂರುಗಳನ್ನ ನೀಡಿರುವ ಮದನ್, ಇದೀಗ ಮಂಜುಶ್ರೀ ಅವರನ್ನ ವರ್ಗಾವಣೆ ಮಾಡುವಂತೆ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾರೆ.