ಮಂಡ್ಯ, [ಮಾ.31]: ಜೆಡಿಎಸ್ ಅಭ್ಯರ್ಥಿ ನಿಖಿಲ್ ನಾಮಪತ್ರದ ಸಿಂಧುತ್ವದ ಬಗೆಗಿನ ಗೊಂದಲ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲವಾಗಿದ್ದು, ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿದೆ. 

ನಿಖಿಲ್ ನಾಮಪತ್ರದ ಬಗ್ಗೆ ಸುಮಲತಾ ಅಂಬರೀಶ್ ಚುನಾವಣೆ ಏಜೆಂಟ್ ಮದನ್ ಎನ್ನುವರು ಆಕ್ಷೇಪ ವ್ಯಕ್ತಪಡಿಸಿದ್ದರು.ಇದನ್ನು ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೂ ದೂರು ನೀಡಿದ್ದರು.

ನಿಖಿಲ್ ನಾಮಪತ್ರ ಗೊಂದಲದ ಟೆನ್ಷನ್ ನಲ್ಲಿ ಸಿಎಂ

ಈ ನಿಟ್ಟಿನಲ್ಲಿ ಇಂದು [ಭಾನುವಾರ] ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರು, ಮದನ್ ಅವರನ್ನು ಸುಮಾರು 3 ಗಂಟೆಗಳ ವಿಚಾರಣೆ ನಡೆಸಿದ್ದು, ವಿಚಾರಣೆಯ ವರದಿಯನ್ನು ಕೇಂದ್ರ ಚುನಾವಣೆ ಆಯೋಗಕ್ಕೆ ರವಾನಿಸುವುದಾಗಿ ಹೇಳಿದ್ದಾರೆ.

ಇನ್ನು ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮದನ್, 'ಪ್ರಾದೇಶಿಕ ಆಯುಕ್ತರು ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಡಿಸಿ [ಮಂಜುಶ್ರೀ] ನಡವಳಿಕೆ ಮತ್ತು ನಾಮಪತ್ರ ಲೋಪದೋಷಗಳ ಬಗ್ಗೆ ಉತ್ತರ ನೀಡಿದ್ದೇನೆ. ಈ ಬಗ್ಗೆ ದೆಹಲಿ ಚುನಾವಣಾಧಿಕರ ಕಛೇರಿಗೆ ಪ್ರಾದೇಶಿಕ ಆಯುಕ್ತರು ವರದಿ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಚುನಾವಣಾಧಿಕಾರಿ ಕೈಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ

ಮಂಡ್ಯ ಡಿಸಿ ಮಂಜುಶ್ರೀಯವರನ್ನೂ ಕೂಡ ಪ್ರಾದೇಶಿಕ ಆಯುಕ್ತರು ವಿಚಾರಣೆ ನಡೆಸಲಿದ್ದಾರೆ.  ಪ್ರಾದೇಶಿಕ ಆಯುಕ್ತರ ಬಳಿ ನ್ಯಾಯ ಸೀಗುತ್ತದೆ ಎಂಬ ನಂಬಿಕೆಯಿದ್ದು,  ನಮ್ಮ ಪರವಾಗಿ ವರದಿ ಬರುವ ನಂಬಿಕೆ ಇದೆ. ನ್ಯಾಯ ಸಿಗಲಿಲ್ಲ ಅಂದ್ರೆ ಕಾನೂನು ಮೋರೆ ಹೋಗಲು ಚಿಂತೆ ನಡೆಸುತ್ತೇವೆ ಎಂದು ಹೇಳಿದರು. 

 ಒಟ್ಟಿನಲ್ಲಿ ನಿಖಿಲ್ ನಾಮಪತ್ರ ವಿವಾದ ಮಂಡ್ಯದಿಂದ ದೆಹಲಿಗೆ ಶಿಫ್ಟ್ ಆಗಿದ್ದು, ನಾಮಪತ್ರ ಅಸಿಂಧುವಾಗುತ್ತಾ? ಅಥವಾ ಸಿಂಧು ಆಗುತ್ತಾ ಅನ್ನೋ ಆತಂಕ ಜೆಡಿಎಸ್ ಪಾಳಯದಲ್ಲಿ ಆವರಿಸಿದೆ. ಇದ್ರಿಂದ ಇದೀಗ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.