ಮಂಡ್ಯದಿಂದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ | ನಾಮಪತ್ರ ಸಲ್ಲಿಕೆಗೂ ಮುನ್ನ ತಿರುಪತಿ ತಿಮ್ಮಪ್ಪನ ಮೊರೆ ಹೋದ ಸುಮಲತಾ | ನಾಳೆ ಮೈಸೂರಿನಲ್ಲಿ ವಾಸ್ತವ್ಯ 

ಮಂಡ್ಯ (ಮಾ. 19): ಮಂಡ್ಯದಿಂದ ಚುನಾವಣೆ ಸ್ಪರ್ಧೆ ಘೋಷಣೆ ಬಳಿಕ ಸುಮಲತಾ ಅಂಬರೀಶ್ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. 

ಹಳೆ, ಹೊಸ ಬಾಯ್‌ಫ್ರೆಂಡ್‌ಗಳ ಮಿಡ್ ನೈಟ್ ಕಿತ್ತಾಟ; ರಾಗಿಣಿ ದ್ವಿವೇದಿ ಸ್ಪಷ್ಟನೆ

ಪುತ್ರ ಅಭಿಷೇಕ್ ಜೊತೆಗೂಡಿ ತಿರುಪತಿಗೆ ಸುಮಲತಾ ಪ್ರಯಾಣ ಬೆಳೆಸಿದ್ದಾರೆ. ಇಂದು ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದಿದ್ದಾರೆ. ದೇವರ ದರ್ಶನದ ಬಳಿಕ ಮೈಸೂರಿಗೆ ಆಗಮಿಸಲಿದ್ದಾರೆ. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. 

ಹೊಟೇಲ್ ಬಿಲ್ ಕಟ್ಟದೇ ಕಾಲ್ಕಿತ್ತ ಸ್ಟಾರ್ ನಟಿ! ದೂರು ದಾಖಲು

ನಾಳೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಬಳಿಕ ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ ಮಾಡಿ ಬಹಿರಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ.