ಬೆಂಗಳೂರು (ಮಾ. 19): ಖ್ಯಾತ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ವಿಚಾರಕ್ಕಾಗಿ ಹಳೆ ಬಾಯ್‌ಫ್ರೆಂಡ್‌ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಹೊಸ ಬಾಯ್‌ಫ್ರೆಂಡ್‌ ಸಾರಿಗೆ ಇಲಾಖೆ ಅಧಿಕಾರಿ ನಡುವೆ ನಗರದ ಪಂಚತಾರಾ ಹೋಟೆಲ್‌ನಲ್ಲಿ ಮಾರಾಮಾರಿ ನಡೆದಿದೆ. 

‘ಟ್ಟೀಟರ್ ನಲ್ಲಿ ಇರಲಾರೆ’ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸುದೀಪ್!

ಈ ಸಂಬಂಧ ನಟಿ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ. " ಶಿವಪ್ರಕಾಶ್ ಹಾಗೂ ರವಿ ನಡುವಿನ ಕಿತ್ತಾಟ ಬೇಸರ ತಂದಿದೆ. ನಾನು ಶೂಟಿಂಗ್ ನಲ್ಲಿದ್ದೇನೆ. ಈ ಘಟನೆಗೂ ನನಗೂ ಸಂಬಂಧವಿಲ್ಲ. ಇದು ಅವರಿಬ್ಬರ ನಡುವಿನ ವಿಚಾರ. ಅನಗತ್ಯವಾಗಿ ನನ್ನನ್ನು ಈ ವಿಷಯದಲ್ಲಿ ಕರೆ ತರಬೇಡಿ. ನನ್ನ ಘನತೆ, ಗೌರವಕ್ಕೆ ಧಕ್ಕೆ ತಂದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು"  ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.