ಬಿಜೆಪಿ ಸೇರ್ಪಡೆಗೊಂಡ ನಟಿ ಜಯಪ್ರದ| ಸಮಾಜವಾದಿ ಪಕ್ಷಕ್ಕೆ ಗುಡ್ ಬೈ ಹೇಳಿದ ಹಿರಿಯ ನಟಿ| ಎಸ್‌ಪಿ ಪಕ್ಷದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಜಯಪ್ರದ| ಪ್ರಧಾನಿ ಮೋದಿ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರಿದ್ದಾಗಿ ಸ್ಪಷ್ಟನೆ| ಮೋದಿ ಅವರೊಂದಿಗೆ ಕೆಲಸ ಮಾಡುವುದು ಸೌಭಾಗ್ಯ ಎಂದ ಜಯಪ್ರದ|

ನವದೆಹಲಿ(ಮಾ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ನಾಯಕಿ, ನಟಿ ಜಯಪ್ರದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಎಸ್‌ಪಿ ನಾಯಕ ಅಮರ್ ಸಿಂಗ್ ಆಪ್ತರಾಗಿದ್ದ ಜಯಪ್ರದ ಆ ಪಕ್ಷದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆಯ್ಕೆಯಾಗಿದ್ದರು. ಇದೀಗ ಪಕ್ಷ ತೊರೆದಿರುವ ಜಯಪ್ರದ, ಬಿಜೆಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Scroll to load tweet…

ನವದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಜಯಪ್ರದ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರುತ್ತಿರುವುದಾಗಿ ತಿಳಿಸಿದ್ದಾರೆ. ಮೋದಿ ಅವರೊಂದಿಗೆ ಕೆಲಸ ಮಾಡುವುದು ಸೌಭಾಗ್ಯ ಎಂದು ಜಯಪ್ರದ ನುಡಿದಿದ್ದಾರೆ.

ಇದೇ ವೇಳೆ ಜಯಪ್ರದ ಉತ್ತರ ಪ್ರದೇಶದ ರಾಮ್‌ಪುರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕ್ಷೇತ್ರದಿಂದ ಎಸ್‌ಪಿ ನಾಯಕ ಆಜಂ ಖಾನ್ ಸ್ಪರ್ಧೆ ಮಾಡುತ್ತಿರುವುದು ವಿಶೇಷ.

ಚುನಾವಣೆ ಸುದ್ದಿಗಳು