ಸತತ ಎರಡನೇ ಬಾರಿಗೆ ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ| ದೇಶದ ಒಟ್ಟು 300 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ| ಕಳೆದ ಲೋಕಸಭೆ ಚುನಾವಣೆಯಲ್ಲಿ 282 ಲೋಕಸಭಾ ಕ್ಷೇತ್ರಗಳಲ್ಲಿ ಜಯ ದಾಖಲಿಸಿದ್ದ ಬಿಜೆಪಿ| ಅಧಿಕಾರ ಹಿಡಿಯಲು ಅಗತ್ಯ ಸಂಖ್ಯಾಬಲ ಪಡೆದ ಬಿಜೆಪಿ| 350 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ|
ನವದೆಹಲಿ(ಮೇ.23): ಸತತ ಎರಡನೇ ಬಾರಿಗೆ ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಿದ್ದು, ದೇಶದ ಒಟ್ಟು 300 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ(2014)ಲೋಕಸಭೆ ಚುನಾವಣೆಯಲ್ಲಿ 282 ಲೋಕಸಭಾ ಕ್ಷೇತ್ರಗಳಲ್ಲಿ ಜಯ ದಾಖಲಿಸಿದ್ದ ಬಿಜೆಪಿ ಈ ಬಾರಿ 18 ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ಬಹುತೇಕ ನಿಚ್ಚಳವಾಗಿದೆ.
ಈ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅಗತ್ಯ ಸಂಖ್ಯಾಬಲವನ್ನು ಸತತ ಎರಡನೇ ಬಾರಿಗೆ ಬಿಜೆಪಿ ಪಡೆದಿದೆ. ಇದೇ ವೇಳೆ ಎನ್‌ಡಿಎ ಈ ಬಾರಿ 350 ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇದೀ ಕೂಡ 2014ರ ಗೆಲುವಿಗಿಂತ ದೊಡ್ಡ ಮಟ್ಟದ ಗೆಲುವು ಎನ್ನಬಹುದಾಗಿದೆ.
