ಹಾವೇರಿ[ಮಾ. 30]  ಸರಿಗಮಪ 15 ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ, ಅಚ್ಚು ಮೆಚ್ಚಿನ ಗಾಯಕ ಹನುಮಂತಪ್ಪ, ತನ್ನದೇ ಶೈಲಿಯ ಹಾಡುಗಳಿಂದ ಕರುನಾಡಿನ ಜನರನ್ನ ಮೋಡಿ ಮಾಡಿದ್ದ. ಜಾನಪದ ಹಾಡುಗಳ ಎಲ್ಲರ ಮನೆ ಮಾತಾಗಿದ್ದ ಈ ಹಳ್ಳಿ ಹೈದನಿಗೆ ಇದೀಗ ಮತದಾನ ಜಾಗೃತಿ ಮೂಡಿಸುವ ಮಹತ್ವದ ಜವಾಬ್ದಾರಿ ಸಿಕ್ಕಿದೆ.

ಕಳ್ಳತನವಾಯ್ತು ಸಿಂಗರ್ ಹನುಮಂತಪ್ಪನ ಮೊಬೈಲ್ - ಹಾಡಿನ ಮೂಲಕ ಮನವಿ!

ಹನುಮಂತಪ್ಪನ ಹಾಡು ಹೇಳುವ ಪರಿಗೆ ಚುನಾವಣಾ ಆಯೋಗವೇ ಫಿದಾ ಆಗಿದೆ. ಹೀಗಾಗಿ ಹಾವೇರಿಯಲ್ಲಿ ಚುನಾವಣಾ ಆಯೋಗ ಕುರಿಗಾಯಿ ಹನುಮಂತನನ್ನ ಪ್ರಚಾರದ ರಾಯಭಾರಿಯನ್ನಾಗಿ ಮಾಡಿದೆ. 

ಜಾನಪದ ಹಾಡುಗಳಿಂದ ಸಂಗೀತ ಲೋಕವೆ ಅಚ್ಚರಿ ಪಡುವಂತೆ ಮಾಡಿದ್ದ ಗಾಯಕ ನಾದಬ್ರಹ್ಮ ಹಂಸಲೇಖ ಅವರ ಮೆಚ್ಚುಗೆ ಪಡೆದುಕೊಂಡಿದ್ದರು.