ಬೆಂಗಳೂರು, (ಮಾ.16): ಐದು ಸಾರಿ ನಾನು ಸ್ಪರ್ಧೆ ಮಾಡಿದಾಗಲ್ಲೂ ಅಪ್ಪನೆ ನಂಗೆ ವೋಟ್  ಹಾಕಿದ್ದಾರೆ ಎನ್ನುವ ವಿಶ್ವಾಸ ನನ್ನಗಿಲ್ಲ ಎನ್ನುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಬಾಣ ಬಿಟ್ಟಿದ್ದಾರೆ.

 ‘ನಮ್ಮ ಅಪ್ಪನೆ ನನಗೆ ವೋಟ್ ಹಾಕಿರಲಿಲ್ಲ. ಮೊದಲ ಭಾರಿ ಬಿಜೆಪಿ ಟಿಕೇಟ್ ಸಿಕ್ಕಾಗ ಅಪ್ಪ ವಿರೋಧ ಮಾಡಿದ್ದರು. ಬಿಜೆಪಿಯಿಂದ ಯಾಕೆ ಟಿಕೇಟ್ ತಕ್ಕೊಂಡಿದ್ಯಾ..ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು ಅಂತಾ ಹೇಳಿದ್ದರು. ಐದು ಸಾರಿ ನಾನು ಸ್ಪರ್ಧೆ ಮಾಡಿದಾಗಲ್ಲೂ ಅಪ್ಪನೆ ನಂಗೆ ವೋಟ್  ಹಾಕಿದ್ದಾರೆ ಎನ್ನುವ ವಿಶ್ವಾಸ ನನ್ನಗಿಲ್ಲ’ ಎಂದು  ಅನಂತ್ ಕುಮಾರ್ ಹೆಗಡೆ ಹೇಳಿಕೆ ಸುದ್ದಿಯನನ್ನು ಸುವರ್ಣ ನ್ಯೂಸ್.ಕಾಂ ಪ್ರಕಟಿಸಿತ್ತು.

‘ನನ್ನ ಅಪ್ಪನೇ ನನಗೆ ವೋಟ್ ಹಾಕಿರಲಿಲ್ಲ’

ಈ ಸುದ್ದಿಯನ್ನು ಸಿದ್ದರಾಮಯ್ಯ ಅವರು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡು ಇತ್ತೀಚೆಗೆ ಹೆಗಡೆ ಹೇಳಿಕೆ ಹಾಗೂ ಈಗಿನ ಹೇಳಿಕೆಯನ್ನು ತೆಗೆದುಕೊಂಡು ತಮ್ಮದೇ ಧಾಟಿಯಲ್ಲಿ ಚಾಟಿ ಬೀಸಿದ್ದಾರೆ. 

ಹಾಗಾದ್ರೆ ಹೆಗಡೆ ಹೇಳಿದ್ದೇನು..? ಇದಕ್ಕೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದೇನು..? ಇಲ್ಲಿದೆ ನೋಡಿ.

 

"