ಕಾರವಾರ[ಮಾ. 15]  ‘ನಮ್ಮ ಅಪ್ಪನೆ ನನಗೆ ವೋಟ್ ಹಾಕಿರಲಿಲ್ಲ. ಮೊದಲ ಭಾರಿ ಬಿಜೆಪಿ ಟಿಕೇಟ್ ಸಿಕ್ಕಾಗ ಅಪ್ಪ ವಿರೋಧ ಮಾಡಿದ್ದರು. ಬಿಜೆಪಿಯಿಂದ ಯಾಕೆ ಟಿಕೇಟ್ ತಕ್ಕೊಂಡಿದ್ಯಾ..ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಬೇಕಿತ್ತು ಅಂತಾ ಹೇಳಿದ್ದರು.

ಐದು ಸಾರಿ ನಾನು ಸ್ಪರ್ಧೆ ಮಾಡಿದಾಗಲ್ಲೂ ಅಪ್ಪನೆ ನಂಗೆ ವೋಟ್  ಹಾಕಿದ್ದಾರೆ ಎನ್ನುವ ವಿಶ್ವಾಸ ನನ್ನಗಿಲ್ಲ’ ಇದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾತು.

ಈ ಸಾರಿ ಮೋದಿ ಅವರನ್ನ ನೋಡಿ ಅಪ್ಪನೇ ಬಂದು ಬಿಜೆಪಿಗೆ ವೋಟ್ ಹಾಕುತ್ತೇನೆ ಎನ್ನುತ್ತಿದ್ದಾರೆ ಎಂದು ಕಾರವಾರದ ದೇವಳಮಕ್ಕಿಯಲ್ಲಿ ನಡೆದ ಪ್ರಚಾರ ವೇಳೆ ಹೇಳಿಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.