ತುಮಕೂರು ದೋಸ್ತಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರ ಪರವಾಗಿ ಘಟಾನುಘಟಿ ನಾಯಕರು ಬುಧವಾರ ಪ್ರಚಾರ ಮಾಡಿದ್ದಾರೆ.

ತುಮಕೂರು[ಏ. 10] ಈ ಬಾರಿಯ ಲೋಕಸಭೆ ಚುನಾವಣೆ ಇಡೀ ವಿಶ್ವ ಗಮನ ಸೆಳೆದಿದೆ. ಸ್ವಾತಂತ್ರ ಬಂದ ಮೇಲೆ ಈ ರೀತಿಯ ಸ್ಥಿತಿ ಭಾರತ ಕ್ಕೆ ಬಂದಿರಲಿಲ್ಲ. ಮೋದಿಗೆ ಪ್ರಜಾತಂತ್ರ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲ. ಅಮಿತ್ ಶಾ, ಮೋದಿ ಈ ವ್ಯವಸ್ಥೆ ಯನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕಪ್ಪುಹಣ ಮಾಡಿ ಅಕ್ರಮ ಸಂಪತ್ತು ಗಳಿಸಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ತಕಾರಾರಿಲ್ಲ.‌ ರಾಜಕೀಯ ಪ್ರೇರಿತವಾಗಿ ನಡೆಯುವ ದಾಳಿಗೆ ವಿರೋಧವಿದೆ ಎಂದರು.

ಮೋದಿಯವರೆ ಅಧಿಕಾರ ಶಾಶ್ವತವಲ್ಲ.‌ ಹಿಟ್ಲರ್ ಕೂಡ ಶಾಶ್ವತವಾಗಿ ‌ಉಳಿಯಲಿಲ್ಲ.‌ ಪ್ರಜಾಪ್ರಭುತ್ವ ತಲೆಕೆಳಗೆ ಮಾಡಿ ಸರ್ವಾಧಿಕಾರಿ ಮಾಡಲು ಹೋದರೆ ಜನರು ಉತ್ತರ ಕೊಡ್ತಾರೆ. ಬಿಹಾರ, ಉತ್ತರ ಪ್ರದೇಶದಲ್ಲಿ 20 ಸ್ಥಾನ ಗೆಲ್ಲಲ್ಲು ಸಾಧ್ಯವಿಲ್ಲ‌ ಮತ್ತೆ ಅಧಿಕಾರಕ್ಕೆ ಏರುತ್ತೇವೆ ಎಂಬ ಭ್ರಮೆಯಲ್ಲಿ ಮೋದಿ ಇದ್ದಾರೆ ಎಂದರು .‌

'ನಾನು ಗೆದ್ದು ದೆಹಲಿಗೆ ಹೋಗ್ತಿನಾ, ಇಲ್ಲವಾ? ಗೊತ್ತಿಲ್ಲ' ಎಂದ HDD

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ, ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಚಿತ.‌ ಮೋದಿ ಸರ್ಕಾರದಲ್ಲಿ ಸಚಿವ ಆಗಿರುವ ಅನಂತಕುಮಾರ ಹೆಗಡೆ ಗ್ರಾಪಂ ಸದಸ್ಯ ಆಗಲು ಯೋಗ್ಯವಲ್ಲದ ವ್ಯಕ್ತಿ. ಸಂವಿಧಾನ ಬದಲಾವಣೆ ಮಾಡುತ್ತೇನೆ ಅಂತ ಹೇಳುತ್ತಾರೆ.‌ ಅಮಿತ್ ಶಾ, ಮೋದಿ ಬೆಂಬಲ‌‌‌ ಇಲ್ಲದೆ ಹೀಗೆಲ್ಲ ಹೇಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಮೋಹನ್‌ ಭಾಗತ್ ಮೀಸಲಾತಿ ತೆಗೆದು ಹಾಕಬೇಕೆಂದು ಹೇಳ್ತಾರೆ. ತೇಜಸ್ವಿ ಸೂರ್ಯ ಅಂಬೇಡ್ಕರ್ ಪ್ರತಿಮೆಯನ್ನು‌ ತೆಗೆದು ಹಾಕಬೇಕು ಎನ್ನುತ್ತಾರೆ. ತೇಜಸ್ವಿ ಸೂರ್ಯನನ್ನು ನಾನು ಅಮಾವಾಸ್ಯೆ ಅಂತ ಕರೆಯುತ್ತೇನೆ ಎಂದು ವ್ಯಂಗ್ಯವಾಡಿದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರನ್ನು ಗೆಲ್ಲಿಸಬೇಕು. ನಮಗೆ ರಾಜಕೀಯ ಭಿನ್ನಾಭಿಪ್ರಾಯವಿದೆ. ಆದರೆ ದೇಶ ಮೊದಲು.‌ ಮೋದಿ‌ ಮತ್ತೆ ಅಧಿಕಾರಕ್ಕೆ ಬಂದರೆ ಚುನಾವಣೆ ನಡೆಯಲ್ಲ ಎಂದರು.

ನೀರಾವರಿ ಯೋಜನೆ ಮಾಡೋಣ. ಅದು ದೊಡ್ಡ‌ ವಿಷಯವಲ್ಲ. ರಾಜಣ್ಣ ಕೆರೆಗಳನ್ನು ತುಂಬಿಸೋಣ. ಮಂಡ್ಯದಲ್ಲಿ ಅವರು ಕ್ಯಾಂಡಿಯೇಟ್ ಹಾಕಿಲ್ಲ. ಇಲ್ಲಿ ದೇವೇಗೌಡರು ಗೆಲ್ತಾರೆ.‌ ರಾಜಣ್ಣ, ಮುದ್ದಹನುಮೇಗೌಡರ‌ ಬಗ್ಗೆ ಅನುಮಾನ ಇತ್ತು ಈಗ ಕ್ಲೀಯರ್ ಆಗಿದೆ.‌ ದೇವೇಗೌಡರನ್ನು 3 ಲಕ್ಷ ಮತಗಳ ಅಂತರದಿಂದ‌ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಮೋದಿ 84 ಸಲ ವಿದೇಶ ಪ್ರವಾಸ ಮಾಡಿದ್ದಾರೆ. ದೇವೇಗೌಡರು ಪ್ರಧಾನಿಯಾದಾಗ ಒಂದೆರಡು ಬಾರಿ ಹೋಗಿಬಂದಿದ್ದಾರೆ.‌ 1690 ಕೋಟಿ ವಿದೇಶ ಪ್ರವಾಸಕ್ಕೆ ಖರ್ಚು ಮಾಡಿದ್ದಾರೆ ಎಂದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.