ಪ್ರಧಾನಿ ಮೋದಿ ಕರ್ನಾಟಕದಲ್ಲಿ ಭಾಷಣ ಮಾಡಿ ತೆರಳಿದ ಮೇಲೆ   ರಾಜಕಾರಣದ ಒಂದೊಂದೆ ಪರಿಣಾಮ ಆರಂಭವಾಗಿದೆ. ಪ್ರಚಾರದ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಮೋದಿ ಭಾಷಣವನ್ನು ವ್ಯಂಗ್ಯವಾಡಿದ್ದಾರೆ.

ತುಮಕೂರು(ಏ.10) ಈ ಕ್ಷೇತ್ರದಲ್ಲಿ ನಾನು ಗೆದ್ದು ದೆಹಲಿಗೆ ಹೋಗ್ತೀನಾ ಇಲ್ಲವೋ ಗೊತ್ತಿಲ್ಲ. ಅದೆಲ್ಲಾ ನಿಮ್ಮ ಕೈಯಲ್ಲಿ ಇದೆ. ಜಾತಿ ಬಗ್ಗೆ ನಾನು ಹೆಚ್ಚು ಮಾತಾಡೊದಿಲ್ಲ. ಪರಮೇಶ್ವರ ಅವರ ನೇತೃತ್ವದಲ್ಲಿ ಹೆಚ್ಚು ಅಂತರದಲ್ಲಿ ಗೆಲ್ಲಿಸಿ ಎಂದು ಮಾಜಿ ಪ್ರಧಾನಿ, ತುಮಕೂರು ಜೆಡಿಎಸ್ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಮನವಿ ಮಾಡಿದರು.

Add Asianetnews Kannada as a Preferred SourcegooglePreferred

"

 ಮೋದಿ ಮತ್ತೆ ನಾನು ಪ್ರಧಾನಿ ಆಗ್ತೀನಿ ಅಂತಾರೆ. ಅದು ಅಷ್ಟು ಸುಲಭವಲ್ಲ. ನನಗೆ ಯಾವ ಯಾವ ರಾಜ್ಯದಲ್ಲಿ ಯಾವ ಸ್ಥಿತಿ ಇದೆ ಅಂತಾ ಗೊತ್ತಿದೆ. ಕೈಯನ್ನು ಆ ಕಡೆ ಈ ಕಡೆ ಮಾಡಿ ಡ್ಯಾನ್ಸ್ ಮಾಡಿಕೊಂಡು ಮಾತಾಡಲು ನಮಗೂ ಬರುತ್ತೆ. ಆದರೆ ನಾವು ಆ ರೀತಿಯ ಮಾತಾಡಲ್ಲ ಎಂದು ಮೋದಿಯವರ ಕರ್ನಾಟಕದ ಭಾಷಣವನ್ನು ವ್ಯಂಗ್ಯವಾಡಿದರು.

ಸುಮಲತಾ ಪರ ಮೋದಿ ಬ್ಯಾಟಿಂಗ್ ನಂತರ ಹುಟ್ಟಿಕೊಂಡ ಪ್ರಶ್ನೆಗಳು

ನಾನು ಮತ್ತೆ ಚುನಾವಣೆ ಗೆ ನಿಲ್ಲೋದಿಲ್ಲ ಅಂದಿದ್ದೆ. ಆದರೆ ಎಲ್ಲರೂ ಸೇರಿ ಎಳೆದುಕೊಂಡು ಬಂದ್ರು. ಇದೊಂದು ಪರೀಕ್ಷೆ.ಈ ಪರೀಕ್ಷೆ ಯಲ್ಲಿ ತೇರ್ಗಡೆ ಆಗಲು ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.