Asianet Suvarna News Asianet Suvarna News

ಶಿವಮೊಗ್ಗ ದೋಸ್ತಿ ಅಭ್ಯರ್ಥಿ ಮಧು ಬಂಗಾರಪ್ಪ ಆಸ್ತಿ ಎಷ್ಟು..?

2ನೇ ಹಂತದ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕೊನೆಯ ದಿನವಾಗಿದ್ದು ಈಗಾಗಲೇ ಹಲವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಿವಮೊಗ್ಗ ಲೋಕಸಭಾ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಯಾಗಿದ್ದು, ಅವರ ಆಸ್ತಿ ವಿವರ ಇಲ್ಲಿದೆ. 

Shivamogga Lok Sabha fray Madhu Bangarappa Debt increase Assets decrease
Author
Bengaluru, First Published Apr 4, 2019, 9:41 AM IST

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮಧು ಬಂಗಾರಪ್ಪ ಅವರ ಆಸ್ತಿ ಕೊಂಚ ಇಳಿಕೆಯಾಗಿದ್ದರೆ, ಸಾಲ ಸ್ವಲ್ಪ ಜಾಸ್ತಿಯಾಗಿದೆ.

ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ ಒಟ್ಟು 47.28 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ತಮ್ಮ ಬಳಿ 47.75 ಕೋಟಿ ಆಸ್ತಿ ಇದೆ ಎಂದು ಆಯೋಗಕ್ಕೆ ತಿಳಿಸಿದ್ದರು. ಮಧು ಪತ್ನಿ ಅನಿತಾ ಮಧು ಬಂಗಾರಪ್ಪ ಬಳಿ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಯಾವುದೇ ಚರಾಸ್ತಿ ಇಲ್ಲ. ಪುತ್ರ ಸೂರ್ಯನ ಬಳಿ 4.30 ಕೋಟಿ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಒಟ್ಟಾರೆ ಇಡೀ ಕುಟುಂಬದ ಆಸ್ತಿ 61.58 ಕೋಟಿ ಎಂದು ಘೋಷಿಸಿದ್ದಾರೆ. ಮಧು ಬಂಗಾರಪ್ಪ ಬಳಿ 70 ಲಕ್ಷ ಬೆಲೆಯ ಎರಡು ಕಾರುಗಳಿವೆ. ವಿವಿಧ ಬ್ಯಾಂಕ್‌ ಹಾಗೂ ಸಂಸ್ಥೆಗಳಲ್ಲಿ ಮಧು ಬಂಗಾರಪ್ಪ 11.88 ಕೋಟಿ ಹಾಗೂ ಅನಿತಾ 5.23 ಕೋಟಿ ರು. ಸಾಲ ಹೊಂದಿದ್ದಾರೆ. ಕಳೆದ ಬಾರಿ 10.72 ಕೋಟಿ ಸಾಲ ಮಾಡಿರುವುದಾಗಿ ಮಧು ಹೇಳಿದ್ದರು. 

ಇದರೊಂದಿಗೆ ಸಾಲದ ಮೊತ್ತ 1.16 ಕೋಟಿ ಹೆಚ್ಚಳವಾಗಿದೆ. ಮಧು ಬಂಗಾರಪ್ಪ ಬಳಿ 1.25 ಕೋಟಿ ರು. ಮೌಲ್ಯದ ವಜ್ರ ಮತ್ತು ಬಂಗಾರದ ಆಭರಣಗಳಿವೆ. ಅನಿತಾ ಬಳಿ 82.73 ಲಕ್ಷ ರು. ಮೌಲ್ಯದ 1 ಕೆ.ಜಿ. ಬಂಗಾರ ಹಾಗೂ ವಜ್ರಾಭರಣಗಳಿವೆ. 7.50 ಲಕ್ಷ ರು. ಬೆಲೆ 25 ಕೆಜಿ ಬೆಳ್ಳಿಯ ವಸ್ತುಗಳಿವೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios