ಸೂಪರ್ ಆಗಿದೆ ಈ ಹೊಸ ಜಾಹೀರಾತು; ನೋಡಿ, ಆನಂದಿಸಿ, ಹಂಚಿಕೊಳ್ಳಿ...
ದೇಶದಲ್ಲಿ ಪ್ರಜಾತಂತ್ರದ ಹಬ್ಬ; ಮತದಾನದ ಜಾಗೃತಿಯು ಮುಖ್ಯ;ವೀಕ್ಷಕರಿಗೆ ಪವರ್‌ಫುಲ್ ಸಂದೇಶ ನೀಡುತ್ತಿದೆ ಹೊಸ ಜಾಹೀರಾತು
ದೇಶಾದ್ಯಂತ ಚುನಾವಣೆ ಆರಂಭವಾಗಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದೆ. ಎರಡನೇ ಹಂತದ ಚುನಾವಣೆ ಎ.18ರಂದು ನಡೆಯಲಿದೆ.
ಈಗಲೂ ಮತದಾನದ ಬಗ್ಗೆ ಅಸಡ್ಡೆ ತೊರುವ ಕೆಲಮಂದಿಯಿದ್ದಾರೆ. ಮತದಾನ ಮಾಡುವ ಎಲ್ಲಾ ವ್ಯವಸ್ಥೆಯಿದ್ದರೂ, ರಜಾದಿನವನ್ನು ಮೋಜು-ಮಸ್ತಿ, ಪ್ರವಾಸ ಮಾಡಿ ಕಳೆಯುವವರಿದ್ದಾರೆ.
ಮತದಾನದ ಬಗ್ಗೆ ಜಾಗೃತಿ ಸಮಯದ ಬೇಡಿಕೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ, ಸರ್ಕಾರ, ಹಾಗೂ ಖಾಸಗಿ ಸಂಸ್ಥೆಗಳು ಕೂಡಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ.
ವಿಭಿನ್ನವಾದ ಜಾಹೀರಾತುಗಳಿಂದ ವೀಕ್ಷಕರ ಮನಸೂರೆಗೊಳಿಸುವ ಸ್ಯಾಮ್ಸೊನೈಟ್, ಇದೀಗ ಹೊಸ ಜಾಹೀರಾತೊಂದನ್ನು ಬಿಡುಗಡೆಮಾಡಿದೆ. "EkDinKiChutti" (ಒಂದು ದಿನದ ರಜೆ) ಎಂಬ ಶೀರ್ಷಿಕೆಯೊಂದಿಗೆ ಹೊರತರಲಾದ ಈ ವಿಡಿಯೋ ನೀವೂ ನೋಡಿ, ಆನಂದಿಸಿ, ಇತರರೊಂದಿಗೂ ಹಂಚಿಕೊಳ್ಳಿ....