ಮುಂಬೈ(ಮಾ.21): ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್  ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಇತರ ಗಣ್ಯರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಟ್ವಿಟರ್ ಮೂಲಕ ಮನವಿ ಮಾಡಿದ್ದರು.  ನಟ ಸಲ್ಮಾನ್‌ ಖಾನ್‌ಗೂ ಟ್ವೀಟ್ ಮಾಡಿದ್ದರು. ಅಮಿತಾಬ್ ಬಚ್ಚನ್ ಸೇರಿದಂತೆ ಬಹುತೇಕರು ಮೋದಿ ಮನವಿಗೆ ಸ್ಪಂದಿಸಿದ್ದರು. ಇದೀಗ ಸಲ್ಮಾನ್ ಖಾನ್ ಒಂದು ವಾರಗಳ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

ಮತದಾನ ಕೇವಲ ಹಕ್ಕು ಮಾತ್ರವಲ್ಲ, ಕರ್ತ್ಯವ್ಯ ಕೂಡ ಹೌದು. ಪ್ರೀತಿಯ ಸಲ್ಮಾನ್ ಖಾನ್, ಅಮೀರ್ ಖಾನ್, ನೀವು ನಿಮ್ಮ ಅಭಿಮಾನಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿ. ಎಲ್ಲರೂ ಮತದಾನ ಮಾಡಲು ಪ್ರೇರಣೆಯಾಗಿ. ಈ ಮೂಲಕ ಪ್ರಜಾಪ್ರಭುತ್ವ ಹಾಗೂ ದೇಶವನ್ನು ಸಧೃಡಗೊಳಿಸೋಣ ಎಂದು ಮೋದಿ ಟ್ವಿಟ್ ಮಾಡಿದ್ದರು.

 

Voting is not only a right but it’s also a duty.

Dear @BeingSalmanKhan and @aamir_khan,

It is time to inspire and motivate youth in your own Andaz to vote so that we can strengthen Apna Democracy & Apna country.

— Chowkidar Narendra Modi (@narendramodi) March 13, 2019

 

 

ಇದೀಗ ಮೋದಿ ಮನವಿಗೆ ಸಲ್ಲು ಸ್ಪಂದಿಸಿದ್ದಾರೆ. ಇಷ್ಟೇ ಅಲ್ಲ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವಿದ್ದೇವೆ. ಮತದಾನ ಎಲ್ಲಾ ಭಾರತೀಯರ ಹಕ್ಕು. ನಾನು ಈ ಮೂಲಕ ಎಲ್ಲರಲ್ಲೂ ವಿನಂತಿಸುತ್ತೇನೆ. ಮತದಾನ ಮಾಡಿ ಸುಭದ್ರ ಸರ್ಕಾರ ರಚಿಸುವಲ್ಲಿ ನೆರವಾಗಿ ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

 

We are a democracy and it is every Indian's right to vote. I urge every eligible Indian to exercise your right and participate in making the Government. https://t.co/WsTdJ3w84O

— Salman Khan (@BeingSalmanKhan) March 21, 2019

 

 

ಇದನ್ನೂ ಓದಿ: ಮೋದಿ ಬೆಂಬಲಿಗರ ಅಣಕವಾಡಲು ಹೋಗಿ ಎಡವಟ್ಟು ಮಾಡಿಕೊಂಡ ರಮ್ಯಾ!

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ