ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೆ ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡುವುದು ಒಂದು ಖಯಾಲಿ ಎಂಬಂತಾಗಿದೆ. ಆದರೆ ಈ ಬಾರಿ ಮೋದಿ ಅವರ ಕುರಿತು ಟ್ವೀಟ್ ಮಾಡುವ ಬರದಲ್ಲಿ ಮೋದಿ ಅಭಿಮಾನಿಗಳನ್ನು ಎಳೆದು ತಂದಿದ್ದಾರೆ.
ಬೆಂಗಳೂರು[ಮಾ. 14] ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ಮಾಜಿ ಸಂಸದೆ ರಮ್ಯಾ ಮತ್ತೆ ಮೋದಿ ವಿರುದ್ಧ ಅಣಕವಾಡಲು ಹೋಗಿ ತಾವೆ ಅಣಕಕ್ಕೆ ಗುರಿಯಾಗಿದ್ದಾರೆ.
ಮತದಾನ ಜಾಗೃತಿ ಸಂಬಂಧ ಮಾಡಿದ್ದ ಟ್ವೀಟ್ ಅವರನ್ನು ಪೇಚಿಗೆ ಸಿಲುಕಿಸಿತ್ತು. ’ನಿಮಗೆ ಗೊತ್ತೆ? ಮೋದಿ ಬೆಂಬಲಿಗರ ಪೈಕಿ ಮೂವರಲ್ಲಿ ಒಬ್ಬರು ಮತ್ತಿಬ್ಬರಂತೆ ಮೂರ್ಖರು' ಎಂದಿರುವ ಮೇಮೆಯನ್ನು ಟ್ವೀಟ್ ಮಾಡಿರುವ ರಮ್ಯಾ, ಇದು ನನ್ನ ಫೇವರೀಟ್ ಎಂದು ಬರೆದಿದ್ದಾರೆ. ಇದಕ್ಕೆ ಬಿಜೆಪಿ ಸಹ ಅಷ್ಟೆ ಕಟುವಾದ ಪ್ರತಿಕ್ರಿಯೆ ನೀಡಿದೆ.
‘ವೋಟೇ ಹಾಕದ ರಮ್ಯಾ ವೋಟರ್ ಲಿಸ್ಟ್ ಚೆಕ್ ಮಾಡ್ಕೊಳಿ ಅಂಥ ಉಪದೇಶ ಕೊಟ್ರು!’
ಈ ಮಹಿಳೆ ರಾಹುಲ್ ಗಾಂಧಿಯ ಐಕ್ಯೂಗೆ ಸರಿಯಾದ ಸ್ಪರ್ಧೆ ನೀಡುತ್ತಾಳೆ ಎಂದು ಬಿಜೆಪಿ ಅಣಕವಾಡಿದೆ. ಕಾಂಗ್ರೆಸ್ ನಾಯಕಿ ಕಳೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಬೆಂಬಲಿಸಿ ಮತ ಹಾಕಿದವರನ್ನು ಮೂರ್ಖರು ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದು ಸಹಜವಾಗಿಯೇ ಬಿಜೆಪಿಯನ್ನು ಕೆರಳಿಸಿದೆ.
