Asianet Suvarna News Asianet Suvarna News

'ಕನಿಷ್ಠ ಆದಾಯ ಯೋಜನೆ' ಘೋಷಿಸಿದ ರಾಹುಲ್: ವಾರ್ಷಿಕ 72 ಸಾವಿರ ವೇತನ!

ರಂಗೇರಿದ ಲೋಕಸಭಾ ಚುನಾವಣಾ ಅಖಾಡ| ಕನಿಷ್ಠ ಆದಾಯ ಯೋಜನೆ' ಜಾರಿಗೊಳಿಸುವ ಭರವಸೆ ನೀಡಿದ ರಾಹುಲ್ ಗಾಂಧಿ

Rs 72000 for India s poor every year Rahul Gandhi s Loksabha election game changer
Author
Bangalore, First Published Mar 25, 2019, 4:35 PM IST

ನವದೆಹಲಿ[ಮಾ.25]: ಲೋಕಸಭಾ ಚುನಾವಣೆ 2019 ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಣೆಯೊಂದನ್ನು ಮಾಡಿದ್ದಾರೆ. ಚುನಾವಣಾ ಕಣದಲ್ಲಿ ಗೆಲುವು ತನ್ನದಾಗಿಸಿಕೊಳ್ಳಲು 'ಕನಿಷ್ಠ ಆದಾಯ ಯೋಜನೆ' ಜಾರಿಗೊಳಿಸುವ ಭರವಸೆ ನೀಡಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಜನರಿಗೆ 72 ಸಾವಿರ ವಾರ್ಷಿಕ ಆದಾಯ ನೀಡುವುದಾಗಿ ಘೋಷಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 'ಕಳೆದ 5 ವರ್ಷಗಳಿಂದ ಮೋದಿ ಸರ್ಕಾರದ ಅವಧಿಯಲ್ಲಿ ಬಡ ಜನರು ಕಷ್ಟ ಅನುಭವಿಸಿದ್ದಾರೆ, ಆದರೆ ನಾವು ಅವರಿಗೆ ನ್ಯಾಯ ನೀಡುತ್ತೇವೆ. ಈ ಹಿಂದೆ ನಾವು ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿದ್ದೆವು. ಈಗ 'ಕನಿಷ್ಠ ಆದಾಯ ಯೋಜನೆ' ಘೋಷಿಸಿ ಬಡತನ ಅಳಿಸಿ ಹಾಕುವ ಭರವಸೆ ನೀಡುತ್ತೇನೆ. ಇಂತಹ ಯೋಜನೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ. ವ್ಯಕ್ತಿಯೊಬ್ಬ ಉದ್ಯೋಗ ಮಾಡುತ್ತಿದ್ದಾನೆ ಎಂದಾದರೆ ಆತ ತಿಂಗಳಿಗೆ ಕನಿಷ್ಠ 12 ಸಾವಿರ ರೂಪಾಯಿ ವೇತನ ಪಡೆಯಬೇಕು ಎಂಬುವುದು ನಮ್ಮ ಅಭಿಪ್ರಾಯವಾಗಿದೆ' ಎಂದಿದ್ದಾರೆ.

ಯೋಜನೆಯ ಕುರಿತಾಗಿ ಮತ್ತಷ್ಟು ಮಾತನಾಡಿದ ರಾಹುಲ್ ಗಾಂಧಿ 'ದೇಶದ ಅತಿ ಬಡವರ್ಗದ ಶೇ. 20ರಷ್ಟು ಕುಟುಂಬಗಳಿಗೆ ವಾರ್ಷಿಕ 72 ಸಾವಿರ ರೂಪಾಯಿ ನೀಡುತ್ತೇವೆ. ಈ ಹಣ ಯಾವುದೇ ಪ್ರಕ್ರಿಯೆಗಳಿಲ್ಲದೆ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತೇವೆ. ಒಂದು ವೆಳೆ ಮೋದಿ ಸರ್ಕಾರ ಅತಿ ಶ್ರೀಮಂತರಿಗೆ ನೀಡುತ್ತಿದೆ ಎಂದಾದರೆ ನಾವು ಅತಿ ಬಡ ವರ್ಗದ ಕುಟುಂಬಗಳಿಗೆ ಹಣ ನೀಡುತ್ತೇವೆ. 'ಕನಿಷ್ಠ ಆದಾಯ ಯೋಜನೆ' ಅತ್ಯಂತ ಪ್ರಭಾವಿ ಹಾಗೂ ಸಿದ್ಧವಾಗಿಡಲಾದ ಯೋಜನರ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾವು ಅನೇಕ ಅರ್ಥಶಾಸ್ತ್ರಜ್ಞರ ವಿಮರ್ಶೆ ನಡೆಸಿದ್ದೇವೆ. ಇದರಿಂದ 5 ಕೋಟಿ ಅಂದರೆ 25 ಕೋಟಿ ಜನರಿಗೆ ಲಾಭವಾಗಲಿದೆ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ 'ಈ ಯೋಜನೆಯಿಂದ ಬಡತನ ನಿರ್ಮೂಲನೆ ಸಾಧ್ಯ. ಇದನ್ನು ಜಾರಿಗೊಳಿಸಲು ಸಾಧ್ಯ ಎಂದು ನಾವು ನಿರೂಪಿಸುತ್ತೇವೆ. ಈ ದೇಶಕ್ಕೆ ತನ್ನದೇ ಧ್ವಜವಿದೆ ಆದರೆ ಪ್ರಧಾನಿ ಮೋದಿಯವರ ರಾಜಕೀಯದಿಂದ ಈ ದೇಶದಲ್ಲಿ 2 ಧ್ವಜಗಳಾಗಿವೆ ಒಂದು ಅನಿಲ್ ಅಂಬಾನಿಗಾಗಿ ಮತ್ತೊಂದು ಬಡವರಿಗಾಗಿ. 21ರ ಶತಮಾನದಲ್ಲಿ ದೇಶದಲ್ಲಿರುವ ಬಡತನ ನಿರ್ಮೂಲನೆಯಾಗಬೇಕು. ನಾವು ದೆಶವನ್ನು ಹೋಳಾಗಲು ಬಿಡುವುದಿಲ್ಲ. ಇದು ಬಡವರು ಹಾಗೂ ಶ್ರೀಮಂತರು ಹೀಗೆ ಎರಡೂ ವರ್ಗದ ಜನರ ದೇಶ, ಬಡವರಿಗೂ ಗೌರವ ತಂದುಕೊಡುವುದು ನನ್ನ ಇಚ್ಛೆ ಎಂದಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios