Asianet Suvarna News Asianet Suvarna News

ಒಂದೇ ಕಟ್ಟಡದ ನಿವಾಸಿಗಳು 2 ಲೋಕಸಭಾ ಕ್ಷೇತ್ರಗಳ ಮತದರರು!

ಕೇರಳದಲ್ಲಿ ಒಂದೇ ಕಟ್ಟಡದ ಮತದಾರರು 2 ಲೋಕಸಭಾ ಕ್ಷೇತ್ರಗಳಿಗೆ ಹಂಚಿಹೋದ್ರು!

Residents of same building to vote in two LS constituencies
Author
Bangalore, First Published Apr 14, 2019, 8:44 AM IST

ಪಟ್ಟಣಪುರಂ[ಏ.14]: ಒಂದು ಬೀದಿಯಿಂದ ಒಂದು ಮತ್ತೊಂದು ಬೀದಿಯಲ್ಲಿರುವ ಜನರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳು, ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳಿಗೆ ಹಂಚಿ ಹೋಗುವುದು ಹೊಸ ವಿಚಾರವೇನಲ್ಲ. ಆದರೆ, ಕೇರಳ ರಾಜ್ಯದ ಪ್ರದೇಶವೊಂದರ ಒಂದೇ ಕಟ್ಟಡದಲ್ಲಿರುವ ಮತದಾರರು ಎರಡು ಲೋಕಸಭಾ ಕ್ಷೇತ್ರಗಳಿಗೆ ಹಂಚಿ ಹೋಗಿದ್ದಾರೆ.

ಅಲ್ಲದೆ, ಈ ಕಟ್ಟಡವು ಅಕ್ಕಪಕ್ಕದಲ್ಲಿರುವ ಪುನಲೂರು ಪುರಸಭೆ ಹಾಗೂ ವಿಲಕ್ಕುಡಿ ಪಂಚಾಯತ್‌ಗೆ ಹಂಚಿ ಹೋಗಿರುವುದು ಮತ್ತೊಂದು ವಿಶೇಷ.

ಸ್ನೇಹಿತರಂ ಹೆಸರಿನ ಈ ಕಟ್ಟಡದಲ್ಲಿ ಒಟ್ಟಾರೆ ಮತದಾರರ ಪೈಕಿ 67 ಮತದಾರರು ಮವೆಲಿಕ್ಕಾರ ಲೋಕಸಭಾ ಹಾಗೂ 32 ಮತದಾರರು ಕೊಲ್ಲಂ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುತ್ತಾರೆ. ಇದೇ ಕಾರಣಕ್ಕಾಗಿ ಈ ಮತದಾರರು ಒಂದೇ ಕಟ್ಟಡದಲ್ಲಿ ವಾಸವಾಗಿರುವ ಹೊರತಾಗಿಯೂ, ತಾವು ಪ್ರತ್ಯೇಕ 2 ಲೋಕಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಬೇಕಿದೆ.

ಒಟ್ಟು 56 ಸೆಂಟ್‌ನಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ 42 ಸೆಂಟ್‌ ಪುನಲೂರು ಪುರಸಭೆ ಹಾಗೂ 14 ಸೆಂಟ್‌ ವಿಲಕ್ಕುಡಿ ಪಂಚಾಯತ್‌ಗೆ ಸೇರುತ್ತದೆ. ಅಲ್ಲದೆ, ಒಂದೇ ಗ್ರಾಮದಲ್ಲಿರುವ ಹೊರತಾಗಿಯೂ, ಇಲ್ಲಿನ ಹಲವು ಮತದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ತಾವು ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲಿ ಮತ ಚಲಾಯಿಸಬೇಕು ಎಂಬ ಗೊಂದಲಕ್ಕೀಡಾಗಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

Follow Us:
Download App:
  • android
  • ios