ಶಶಿ ತರೂರ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪ್ರಚಾರ| ತಿರುವನಂತಪುರಂನಲ್ಲಿ ಶಶಿ-ರಾಹುಲ್ ಅಬ್ಬರದ ಪ್ರಚಾರ| ಕಬ್ಬಿಣದ ಚೈನ್ ಬಿದ್ದು ಗಾಯಗೊಂಡಿರುವ ತರೂರ್| ತಲೆಗೆ ಬಟ್ಟೆ ಸುತ್ತಿಕೊಂಡೇ ಶಶಿ ಪ್ರಚಾರ| ಶಶಿ ತರೂರ್ ಸಮರ್ಪಣಾ ಭಾವ ಮೆಚ್ಚಿದ ರಾಹುಲ್ ಗಾಂಧಿ|

ತಿರುವನಂತಪುರಂ(ಏ.17): ತುಲಾಭಾರ ಸಮಯದಲ್ಲಿ ಕಬ್ಬಿಣದ ಚೈನ್ ಬಿದ್ದು ಗಾಯಗೊಂಡಿರುವ, ತಿರುವನಂತಪುರಂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಪರ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

Scroll to load tweet…

ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಹೊರ ಬಂದಿರುವ ಶಶಿ ತರೂರ್, ತಲೆಗೆ ಬಟ್ಟೆ ಸುತ್ತಿಕೊಂಡೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ವೇಳೆ ಶಶಿ ತರೂರ್ ಅವರ ಸಮಪರ್ಣಾ ಭಾವ ಎಲ್ಲರಿಗೂ ಆದರ್ಶ ಎಂದು ರಾಹುಲ್ ಗಾಂಧಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

Scroll to load tweet…

ರಾಹುಲ್ ಗಾಂಧಿ ತಿರುವನಂತಪುರಂ ಸಭೆ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಶಶಿ ತರೂರ್, ತಮ್ಮ ಕ್ಷೇತ್ರದಲ್ಲಿ ರಾಹುಲ್ ಪ್ರಚಾರ ನಡೆಸಿದ್ದಕ್ಕೆ ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.