ಮೋದಿ ತವರಿನಲ್ಲಿ ಪ್ರಿಯಾಂಕಾ ಚೊಚ್ಚಲ ರಾಜಕೀಯ ಭಾಷಣ| ಭಾಷಣದಲ್ಲಾದ ಈ ಮಹತ್ವದ ಬೆಳವಣಿಗೆಯನ್ನು ಗಮನಿಸಲೇ ಇಲ್ಲ ಹಲವರು| ಮೋದಿ, ರಾಹುಲ್ ಗಿಂತ ಭಿನ್ನವಾಗಿ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ

ಗಾಂಧಿನಗರ[ಮಾ.14]: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಇತ್ತ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿರುವ ಪ್ರಿಯಾಂಕಾ ಗಾಂಧಿ ವಿಶೇಷ ಗಮನ ಸೆಳೆಯುದಿದ್ದಾರೆ. ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದ ಪ್ರಿಯಾಂಕಾ ತಮ್ಮ ಮೊದಲ ರಾಜಕೀಯ ಭಾಷಣವನ್ನು ಮೋದಿ ತವರು ಕ್ಷೇತ್ರದಲ್ಲೇ ಮಾಡಿದ್ದರೆಂಬುವುದು ಗಮನಾರ್ಹ. ಆದರೆ ಮಂಗಳವಾರದಂದು ಪ್ರಿಯಾಂಕಾ ಮಾಡಿದ್ದ ಚೊಚ್ಚಲ ಭಾಷಣದಲ್ಲಿದ್ದ ಮಹತ್ವದ ಬದಲಾವಣೆಯೊಂದು ಮಾತ್ರ ಅನೇಕರ ಗಮನಕ್ಕೆ ಬಂದೇ ಇಲ್ಲ. ಅಂತಹುದ್ದೇನು ಅಂತೀರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ.

ಈ ಎಲೆಕ್ಷನ್ ಸ್ವಾತಂತ್ರ್ಯ ಹೋರಾಟಕ್ಕಿಂತ ಕಡಿಮೆ ಇಲ್ಲ: ಮೋದಿ ತವರಲ್ಲಿ ಪ್ರಿಯಾಂಕಾ ಮೊದಲ ಭಾಷಣ

ಸಾಮಾನ್ಯವಾಗಿ ಈವರೆಗಿನ ಎಲ್ಲಾ ರಾಜಕಾರಣಿಗಳು, ಮೋದಿ ರಾಹುಲ್ ಗಾಂಧಿ ಸೇರಿದಂತೆ ತಮ್ಮ ಭಾಷಣದ ಆರಂಭದಲ್ಲಿ 'ಮೇರೆ ಬಾಯಿಯೋಂ ಜೌರ್ ಬೆಹನೋಂ[ನನ್ನ ಸಹೋದರ ಸಹೋದರಿಯರೇ]' ಎಂದು ಆರಂಭಿಸುತ್ತಿದ್ದರು. ಆದರೆ ಮೋದಿ ತವರಿನಲ್ಲಿ ಚೊಚ್ಚಲ ಭಾಷಣ ಮಾಡಿರುವ ಪ್ರಿಯಾಂಕಾ, ತಮ್ಮ ಭಾಷಣದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದ್ದಾರೆ. ಭಾಷಣದ ಆರಂಭದಲ್ಲೂ 'ಮೇರೆ ಬೆಹನೋಂ ಔರ್ ಬಾಯಿಯೋಂ[ನನ್ನ ಸಹೋದರಿಯರೇ ಹಾಗೂ ಸಹೋದರರೇ)' ಎನ್ನುವ ಮೂಲಕ ಮಹಿಳೆಯರಿಗೇ ಆದ್ಯತೆ ನೀಡಿದ್ದಾರೆ. 

Scroll to load tweet…

ಮೊದಲು ಈ ವಿಚಾರ ಅನೇಕರ ಗಮನಕ್ಕೆ ಬಂದಿರಲಿಲ್ಲ. ಆದರೆ ಅಸ್ಸಾಂ ಸಂಸದೆ ಸುಶ್ಮಿತಾ ದೇವ್ ಪ್ರಿಯಾಂಕಾ ಗಾಂಧಿಯ ಭಾಷಣವನ್ನು ಉಲ್ಲೇಖಿಸುತ್ತಾ 'ಗುಜರಾತ್ ನಲ್ಲಿ ಪ್ರಿಯಾಂಕಾ ಗಾಂಧಿ ನೀಡಿದ್ದ ಭಾಷಣ ಅತ್ಯಂತ ಪರಿಣಾಮಕಾರಿಯಾಗಿತ್ತು. ಅವರು ಪುರುಷರಿಗಿಂತ ಮೊದಲು ಮಹಿಳೆಯರಿಗೆ ಆದ್ಯತೆ ನೀಡಿದ್ದು ನನಗೆ ಬಹಳ ಇಷ್ಟವಾಯ್ತು' ಎಂದು ಟ್ವೀಟ್ ಮಾಡಿದ್ದಾರೆ. ಇದಾದ ಬಳಿಕ ಈ ವಿಡಿಯೋ ಬಹಳಷ್ಟು ವೈರಲ್ ಆಗಿದೆ.

Scroll to load tweet…

ಇನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಮೂರನೇ ಟ್ವೀಟ್ ಮಾಡಿರುವ ಪ್ರಿಯಾಂಕಾ ಸಂಸದೆಗೆ ಪ್ರತಿಕ್ರಿಯಿಸುತ್ತಾ 'ಯಾರೂ ಈ ವಿಚಾರಗಮನಿಸಿಲ್ಲ ಎಂದು ಭಾವಿಸಿದ್ದೆ' ಎಂದು ಬರೆದಿದ್ದಾರೆ.