ಉಡುಪಿ (ಮಾ.12): ದೇಶದೆಲ್ಲಡೆ ಈಗ ಲೋಕಸಭಾ ಚುನಾವಣೆ ಗಾಳಿ ಬೀಸುತ್ತಿದೆ. ಮತದಾನ ಮಾಡೋ ಉತ್ಸಾಹದಲ್ಲಿರುವ ಮತದಾರರಿಗೆ ಖಾಸಗಿ ಬಸ್‌ಗಳು ಶಾಕ್ ನೀಡಿದೆ.  ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ, ಇತ್ತ ಖಾಸಗಿ ಬಸ್‌ಗಳು ಟಿಕೆಟ್ ದರ ಹೆಚ್ಚಿಸಿದೆ. 

ಇದನ್ನೂ ಓದಿ: ಮತ್ತೆ ಮೋದಿ ಸರ್ಕಾರ - ಬಿಜೆಪಿಗೆ ಗೆಲುವು : ಸಮೀಕ್ಷೆ

ಬೆಂಗಳೂರುನಿಂದ ಕುಂದಾಪುರ ಭಾಗಕ್ಕೆ ತೆರಳುವ ಹಾಗೂ ಬೆಂಗಳೂರಿನಿಂದ ಕರಾವಳಿ ಸಂಪರ್ಕಿಸುವ ಖಾಸಗಿ ಬಸ್ ದರದಲ್ಲಿ ಏರಿಕೆ ಮಾಡಲಾಗಿದೆ. ಚುನಾವಣೆಯ ಮುನ್ನಾದಿನದ ಬಸ್ ದರದಲ್ಲಿ ಏರಿಕೆ ಮಾಡಲಾಗಿದ್ದು, ಮತದಾನ ಮಾಡಲು ಜನರು ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಚುನಾವಣಾ ಹೊಸ್ತಿಲಲ್ಲಿ 'ಕೈ'ಗೆ ಕಹಿ ಸುದ್ದಿ ಕೊಟ್ಟ ಮಾಯಾವತಿ!

ಟಿಕೆಟ್ ದರವನ್ನು ಶೇ.30 ರಿಂದ ಶೇ.50 ರಷ್ಟು ಏರಿಕೆ ಮಾಡಲಾಗಿದೆ. ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದ ಬಳಿಕ ಮತದಾನ ಮಾಡಲು ತವರಿಗೆ ಹೊರಟವರ ಜೇಬಿಗೆ ಕತ್ತರಿ ಹಾಕಿದೆ. ಆನ್ ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಹೊರಟಾಗ ಬಸ್ ದರ ಏರಿಕೆಯಾಗಿರುವು ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ಮಂಡ್ಯದಲ್ಲಿ ಡಿಕೆಶಿ ಗೋ ಬ್ಯಾಕ್ ಅಭಿಯಾನ

ಚುನಾವಣಾ ದಿನಾಂಕದ ಆಸುಪಾಸಿನ ದಿನಗಳಲ್ಲಿ ಮಾತ್ರ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ಸಂಪೂರ್ಣ ಮತದಾನಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಹಬ್ಬ ಹಾಗೂ ಇತರ ವಿಶೇಷ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುತ್ತಿದ್ದ ಖಾಸಗಿ ಬಸ್‌ಗಳು ಇದೀಗ ಚುನಾವಣೆಯ ಲಾಭ ಪಡೆಯಲು ಮುಂದಾಗಿದೆ.