ಅಮರಾವತಿ[ಏ.13]: ಸಂಜೆ 6ಕ್ಕೆ ಮುಗಿಯಬೇಕಿದ್ದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮಧ್ಯರಾತ್ರಿ 1 ಗಂಟೆಯವರೆಗೂ ನಡೆದ ಘಟನೆ ಆಂಧ್ರಪ್ರದೇಶದಲ್ಲಿ ಗುರುವಾರ ನಡೆದಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 380ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ದೋಷ ಕಾಣಿಸಿಕೊಂಡ ಕಾರಣ ಮತದಾರರು ಮತ್ತು ಚುನಾವಣಾ ಅಧಿಕಾರಿಗಳು ಮಧ್ಯರಾತ್ರಿವರೆಗೂ ಕಾಯಬೇಕಾಗಿ ಬಂದಿದೆ.

ದೋಷ ಕಂಡುಬಂದ ಮತಯಂತ್ರಗಳ ದುರಸ್ತಿ ಮತ್ತು ಬೇರೆ ಮತಯಂತ್ರಗಳನ್ನು ಅಳವಡಿಸಬೇಕಾದ ಕಾರಣ, ಮತದಾನದ ಅವಧಿಯನ್ನು ತಡರಾತ್ರಿಯವರೆಗೂ ವಿಸ್ತರಿಸಲಾಗಿತ್ತು. ಆದರೆ ಯಾರು ನಿಗದಿತ ಮತದಾನದ ಅವಧಿಯಾದ ಸಂಜೆ 6ರೊಳಗೆ ಮತಗಟ್ಟೆಗೆ ಬಂದಿದ್ದರೋ ಅವರಿಗೆ ಮಾತ್ರ ರಾತ್ರಿಯವರೆಗೂ ಮತ ಚಲಾಯಿಸಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಹೀಗೆ ಮತದಾನದ ಅವಧಿ ಮಧ್ಯರಾತ್ರಿವರೆಗೂ ವಿಸ್ತರಣೆಯಾದ ಕಾರಣ ಮತದಾರರು ಸುಮಾರು 7 ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲುವಂತೆ ಆಗಿತ್ತು. ಈ ಬಾರಿ ರಾಜ್ಯದಲ್ಲಿ ಅತ್ಯಂತ ತುರುಸಿನ ಹಣಾಹಣಿ ಏರ್ಪಟ್ಟಕಾರಣ, ಮತದಾರರು ರಾತ್ರಿಯವರೆಗೂ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28