ಬೆಳಗಾವಿ :  ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕೆಲಸಕ್ಕೆ ಓರ್ವ ಕೂಲಿ ಕಾರ್ಮಿಕನಿಗೆ ಒಂದು ದಿನಕ್ಕೆ 249 ದೊರೆಯುತ್ತಿದೆ. ಆದರೆ, ಅದೇ ಕೂಲಿ ಕಾರ್ಮಿಕರು ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗುವುದು, ಸಭೆ ಸಮಾರಂಭಗಳಲ್ಲಿ ಘೋಷಣೆ ಕೂಗುವ ಕೆಲಸ ಮಾಡಿದರೆ 300 ರಿಂದ 500 ಸಿಗಲಿದೆ!

ಹೌದು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನರೇಗಾ ಕೂಲಿ ಕಾರ್ಮಿಕರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಅಭ್ಯರ್ಥಿಗಳು ಮತ್ತು ಮುಖಂಡರು ಚಿಂತನೆಯಲ್ಲಿದ್ದಾರೆ. ಇನ್ನೇನು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯದ ನಂತರ ನರೇಗಾ ಕೂಲಿ ಕಾರ್ಮಿಕರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಮುಂದಾಗುತ್ತಿದ್ದಾರೆ.

ಕಾರ್ಯಕರ್ತರ ಕೊರತೆ: ಲೋಕಸಭೆಗೆ ಚುನಾವಣೆ ರಂಗೇರುತ್ತಿದ್ದರೂ, ಪ್ರಚಾರಕ್ಕೆ ಕಾರ್ಯಕರ್ತರು ಮತ್ತು ಬೆಂಬಲಿಗರು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿಲ್ಲ. ಹೀಗಾಗಿ ಸಹಜವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮತ್ತು ಆಯಾ ಪಕ್ಷದ ಮುಖಂಡರು ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರು, ಎನ್‌ಜಿಒ, ಸ್ತ್ರೀ ಶಕ್ತಿ, ಸ್ವಸಹಾಯ ಸಂಘಟನೆಗಳ ಸದಸ್ಯರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. 

ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶ ಕಾರ್ಮಿಕರಲ್ಲಿ ಹಬ್ಬದ ವಾತಾವರಣ ಮನೆ ಮಾಡುತ್ತದೆ. ಬಿಸಲಿನ ಝಳಕ್ಕೆ ಕೂಲಿ ಮಾಡುವುದು ಕಷ್ಟ, ಸಂಬಳ ಕೇವಲ 200 ರಿಂದ 300 ನೀಡುತ್ತಾರೆ. ಆದರೆ, ಚುನಾವಣಾ ಪ್ರಚಾರಕ್ಕೆ ಹೋದರೆ ಊಟ, ಉಪಚಾರ ಜೊತೆಗೆ ಸಂಬಳವೂ ಹೆಚ್ಚಿಗೆ ಸಿಗುತ್ತದೆ ಎಂದು ಸವದತ್ತಿ, ರಾಮದುರ್ಗ ತಾಲೂಕಿನ ಕೂಲಿ ಕಾರ್ಮಿಕರು ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಬಲಾಢ್ಯ ಪಕ್ಷೇತರ ಅಭ್ಯರ್ಥಿಗಳ ಹಿಂದೆ ಓಡಾಡೋದು, ಜೈಕಾರ ಹಾಕೋದು ಮಾತ್ರ ನಮ್ಮ ಕೆಲಸ, ಹೀಗಾಗಿ ಚುನಾವಣಾ ಪ್ರಚಾರವೇ ನಮಗೆ ಅನುಕೂಲ ಎಂದು ಕೆಲವು ಕೂಲಿ ಕಾರ್ಮಿಕರು ಹೇಳಿಕೊಂಡಿದ್ದಾರೆ.

ವರದಿ :  ಜಗದೀಶ ವಿರಕ್ತಮಠ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ