ನವದೆಹಲಿ : ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜನರು ಮೂರ್ಖರೆಂದು ಯೋಚಿಸುವುದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದರು. 

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್ ನಲ್ಲಿ ನರೆಯುತ್ತಾ, ಜನರು ವಂಶ ರಾಜಕಾರಣವನ್ನು ತ್ಯಜಿಸಿ ಪ್ರಾಮಾಣಿಕತೆಗೆ ಮತ ನೀಡಿದ್ದಾರೆ ಎಂದು ಹೇಳಿದ್ದರು.  ಅಲ್ಲದೇ ಸರ್ಕಾರಕ್ಕಿಂತ ಕುಟುಂಬ ಮೊದಲು ಎನ್ನುವುದನ್ನು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡಬೇಕು. ದೇಶದ ಎಲ್ಲಾ ಸಂಸ್ಥೆಗಳಿಗೂ ಕುಟುಂಬ ರಾಜಕಾರಣ ಎನ್ನುವುದು ಮಾರಕ. ಮಾಧ್ಯಮ, ಸೇನೆ, ನ್ಯಾಯಾಂಗ ಎಲ್ಲದಕ್ಕೂ ಕೂಡ ಕುಟುಂಬ ರಾಜಕಾರಣದಿಂದ ಸಮಸ್ಯೆ ಎಂದಿದ್ದರು. 

ಈ ಸಂಬಂಧ ತಮ್ಮ ಮೂರು ದಿನಗಳ ಬೋಟ್ ಕ್ಯಾಂಪೇನ್ ವೇಳೆ ಪ್ರಸ್ತಾಪಿಸಿದ ಪ್ರಿಯಾಂಕ, ಕಳೆದ ಐದು ವರ್ಷಗಳಲ್ಲಿ ಮಾಧ್ಯಮವನ್ನೂ ಸೇರಿ ಬಿಜೆಪಿ ತನ್ನ ಹಿಡಿತ ಸಾಧಿಸುತ್ತಿದೆ. ಆದ್ದರಿಂದ ಜನರು ಮೂರ್ಖರು ಎಂದು ಭಾವಿಸುವುದನ್ನು ಮೊದಲು ಪ್ರಧಾನಿ ನಿಲ್ಲಿಸಲು ಎಂದು ಹೇಳಿದರು. 

ಅಧಿಕಾರದಿಂದ ಈ ರೀತಿಯಾಗಿ ವರ್ತಿಸುತ್ತಿದ್ದಾರೆ. ಯಾವಾಗ ಅಧಿಕಾರದ ದಾಹ ಅವರ ತಲೆಗೆ ಏರುತ್ತದೆಯೋ ಆಗ ಇಂತಹ ತಪ್ಪು ಗ್ರಹಿಕೆಗಳು ಅವರ ತಲೆಯಲ್ಲಿ ಮೂಡುತ್ತದೆ. ನಮ್ಮ ವಿರುದ್ಧ ಎಷ್ಟೇ ಪಿತೂರಿ ನಡೆಸಿದರೂ ನಾವು ತಲೆ ಎತ್ತಿ ನಿಲ್ಲುತ್ತೇವೆ ಎಂದು ಪ್ರಿಯಾಂಕ ವಾಗ್ದಾಳಿ ನಡೆಸಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ