Asianet Suvarna News Asianet Suvarna News

ಮೋದಿ ಬೆಂಬಲಿಸಿ 900 ಕಲಾವಿದರಿಂದ ಪತ್ರ: 'ಮಜ್ಬೂತ್ ಸರ್ಕಾರ್' ಕ್ಕೆ ನಮ್ಮ ಮತ!

ನರೇಂದ್ರ ಮೋದಿ ಬೆಂಬಲಿಸಿ 900 ಕಲಾವಿದರಿಂದ ಪತ್ರ ಚಳವಳಿ| ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡಲು ಮನವಿ| ಮೋದಿ ಬೆಂಬಲಕ್ಕೆ ನಿಂತ 900 ಪ್ರಮುಖ ಕಲಾವಿದರು| ಪಂಡಿತ್ ಜರ್ಸಾಜ್, ವಿವೇಕ್ ಒಬೆರಾಯ್, ಶಂಕರ್ ಮಹಾದೇವನ್, ರೀತಾ ಗಂಗೂಲಿ ಸೇರಿದಂತೆ ಹಲವರಿಂದ ಸಹಿ| ಸದೃಢ ಸರ್ಕಾರಕ್ಕೆ ಪ್ರಧಾನಿ ಮೋದಿ ಬೆಂಬಲಿಸುವಂತೆ ಕಲಾವಿದರ ಮನವಿ| ಮೋದಿ ಬೆಂಬಲಕ್ಕೆ ಕರ್ನಾಟಕದ ಪ್ರಸಿದ್ಧ ಕತಕ್ ಕಲಾವಿದರಾದ ನಿರೂಪಮಾ ಮತ್ತು ರಾಜೇಂದ್ರ|

Over 900 Artistes Issued A Joint Statement Supporting PM Modi
Author
Bengaluru, First Published Apr 11, 2019, 2:30 PM IST

ನವದೆಹಲಿ(ಏ.11): ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಿ ಇತ್ತೀಚಿಗೆ ಕಲಾವಿದರ ಗುಂಪೊಂದು ಪತ್ರ ಚಳವಳಿ ನಡೆಸಿದ ಬೆನ್ನಲ್ಲೇ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಗ್ರಹಿಸಿ ಸುಮಾರು 900 ಕಲಾವಿದರು ಪತ್ರ ಬರೆದಿದ್ದಾರೆ.

ಪಂಡಿತ್ ಜರ್ಸಾಜ್, ವಿವೇಕ್ ಒಬೆರಾಯ್, ಶಂಕರ್ ಮಹಾದೇವನ್, ರೀತಾ ಗಂಗೂಲಿ ಸೇರಿದಂತೆ ಪ್ರಮುಖ ಕಲಾವಿದರು ಮೋದಿ ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ದೇಶಕ್ಕೆ ಮಜ್ಬೂತ್ ಸರ್ಕಾರ್(ಸದೃಢ ಸರ್ಕಾರ)ದ ಅವಶ್ಯಕತೆಯಿದ್ದು, ಇದಕ್ಕಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿ ಎಂದು ಈ ಕಲಾವಿದರು ಮನವಿ ಮಾಡಿದ್ದಾರೆ.

"

ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿರುವ ಕರ್ನಾಟಕದ ಪ್ರಸಿದ್ಧ ಕತಕ್ ನೃತ್ಯಗಾರರಾದ ನಿರೂಪಮಾ ಮತ್ತು ರಾಜೇಂದ್ರ, ಅಭ್ಯರ್ಥಿ ಲೆಕ್ಕಿಸದೇ ಮೋದಿ ಅವರಿಗಾಗಿ ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

ಇನ್ನು ಮೋದಿ ಬೆಂಬಲಿಸಿ ನಡೆದ ಪತ್ರ ಚಳವಳಿಯಲ್ಲಿ ಸಹಿ ಹಾಕಿದ ಇತರ ಕಲಾವಿದರೆಂದರೆ, ತ್ರಿಲೋಕಿನಾಥ್ ಮಿಶ್ರಾ, ಕೋಯಿನಾ ಮಿತ್ರಾ, ಅನುರಾಧಾ ಪೋಡ್ವಾಲ್, ಹನ್ಸ್ ರಾಜ್ ಹನ್ಸ್, ಮಲಿನಿ ಅವಸ್ಥಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಮೋದಿ ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ19ರವರೆಗೆ ಏಳು ಹಂತಗಳಲ್ಲಿ ಮತದಾನ, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios